ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ದಾಖಲಿಸಿರುವ ಪ್ರಕರಣದಲ್ಲಿ ದೆಹಲಿ ಮಾಜಿ ಡಿಸಿಎಂ, ಆಪ್(AAP) ನಾಯಕ ಮನೀಷ್ ಸಿಸೋಡಿಯಾ(manish sisodia) ಜಾಮೀನು ಮಂಜೂರು ಮಾಡಲಾಗಿದೆ. ಸುಪ್ರೀಂ ಕೋರ್ಟ್(SC) ನ್ಯಾಯಮೂರ್ತಿಗಳಾದ ಕೆ.ವಿ ವಿಶ್ವನಾಥನ್, ಬಿ.ಆರ್ ಗವಾಯಿ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ.
ದೆಹಲಿ ತೀರ್ಪು ರದ್ದು ಮಾಡಿ ಷರತ್ತು ಬದ್ಧ ಹಾಗೂ 2 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್, ಪಾಸ್ ಪೋರ್ಟ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಹೇಳಿ ಜಾಮೀನು(Bail) ನೀಡಲಾಗಿದೆ. ವಿಚಾರಣೆ ಮುಗಿಯುವ ತನಕ ಅವರನ್ನು ಜೈಲಿನಲ್ಲಿಡುವುದು ಸಂವಿಧಾನದ 21ನೇ ವಿಧಿ ಉಲ್ಲಂಘನೆ ಎಂದು ಹೇಳಲಾಗಿದೆ.