Ad imageAd image

ಕೊಲೆ ಪ್ರಕರಣ, ಶಾಸಕ ಬೈರತಿ ಬಸವರಾಜಗೆ ಜಾಮೀನು

Nagesh Talawar
ಕೊಲೆ ಪ್ರಕರಣ, ಶಾಸಕ ಬೈರತಿ ಬಸವರಾಜಗೆ ಜಾಮೀನು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ಶಾಸಕ ಬೈರತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಜಾಮೀನು ನೀಡಿದರು.

2 ಲಕ್ಷದ ಬಾಂಡ್, ಇಷ್ಟು ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಅವರ ಮೇಲೆ ಪ್ರಭಾವ ಬೀರಬಾರದು. ತನಿಖೆಯ ಸಂದರ್ಭದಲ್ಲಿ ಯಾವಾಗ ಕರೆದರೂ ಬರಬೇಕು. ಅನಗತ್ಯ ಮುದ್ದತಗಳನ್ನು ಬೇಡದೆ ವಿಚಾರಣಾ ಕೋರ್ಟ್ ಗೆ ಹಾಜರಾಗಬೇಕು. ಮೂರು ತಿಂಗಳ ಕಾಲ 2ನೇ ಭಾನುವಾರ ಮುಂಜಾನೆ 9 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಅಲ್ಲದೆ ಕೋರ್ಟ್ ಅನುಮತಿ ಇಲ್ಲದೆ ವಿದೇಶಕ್ಕೆ ಹೋಗಬಾರದು ಎಂದು ಹೇಳಿ ಷರತ್ತುಬದ್ಧ ಜಾಮೀನು ನೀಡಿದೆ.

WhatsApp Group Join Now
Telegram Group Join Now
Share This Article