ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟರಾದ ವಿನಯಗೌಡ, ರಜತ್ ಕಿಶನಗೆ ಜಾಮೀನು ಮಂಜೂರು ಆಗಿದೆ. 24ನೇ ಎಸಿಎಂ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. 10 ಸಾವಿರ ರೂಪಾಯಿ ಶ್ಯೂರಿಟ ನೀಡುವಂತೆ ಸೂಚಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಆದೇಶ ಪ್ರತಿ ಜೈಲಾಧಿಕಾರಿಗಳಿಗೆ ತಲುಪಿದ ಬಳಿಕ ಬಿಡುಗಡೆಯಾಗಲಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಇಬ್ಬರು ಕೈಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ. ಪೊಲೀಸರಿಗೆ ನಕಲಿ ಮಚ್ಚು ತೋರಿಸಲಾಗಿದೆ ಎನ್ನುವ ಆರೋಪ ಸಹ ಇದೆ.