ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಬೈಕ್ ನಲ್ಲಿ ವಿಜಯೋತ್ಸವದ ರ್ಯಾಲಿ ಮಾಡಿದ್ದ 7 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ಹಾನಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ನ್ಯಾಯಾಂಗ ಇವರಿಗೆ ಶನಿವಾರ ನ್ಯಾಯಾಂಗ ಬಂಧನ ವಿಧಿಸಿದೆ.
ಹಾನಗಲ್ ತಾಲೂಕಿನ ಅಕ್ಕಿಆಲೂರ ಕಮಾಟಿಗೇರ ಓಣಿಯ ಸಮೀವುಲ್ಲಾ ಅಬ್ದುಲ್ ವಾಹೀದ್ ಲಾಲಾನವರ್, ಹಳ್ಳೂರು ಓಣಿಯ ಶೋಹಿಬ್ ನಿಯಜ್ಅಹ್ಮದ್, ಇಮಾಮನಗರದ ಮಹ್ಮದಸಾದಿಕ್ ಬಾಬುಸಾಬ್ ಆಗಸಿಮನಿ ಮಸದರಸಾಬ್ ಮಹ್ಮದ್ ಸಾದಿಕ್ ಮಂಡಕ್ಕಿ, ಮಖಬೂಲ್ ಅಹ್ಮದ್ ಚಂದನಕಟ್ಟಿ, ತಸೀಪ್ ಖಾಸೀಂಸಾಬ್ ಚೌಟಿ ಈ 7 ಆರೋಪಿಗಳನ್ನು ಬಂಧಿಸಲಾಗಿದೆ.