ಪ್ರಜಾಸ್ತ್ರ ಸುದ್ದಿ
ಬಂಟ್ವಾಳ(bantwal): ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಆಡಿಯೋ ಸವಾಲ್ ಸ್ವೀಕರಿಸಿದ ಹಿಂದೂಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಸೋಮವಾರ ಮುಂಜಾನೆಯಿಂದಲೇ ನಗರದ ಬಿ.ಸಿ ರೋಡ್ ನಲ್ಲಿ ಜಮಾಯಿಸಿದ್ದಾರೆ. ಇದರಿಂದಾಗಿ ಆತಂಕ ನಿರ್ಮಾಣವಾಗಿದೆಶರೀಫ್ ಸವಾಲ್ ಸ್ವೀಕರಿಸಿ ರೋಡಿಗೆ ಬಂದಿದ್ದೇವೆ. ಹಿಂದೂ ಕಾರ್ಯಕರ್ತರಿಗೆ ಜಯ ಸಿಕ್ಕಿದೆ. ಇಂತಹ ಸವಾಲ್ ಹೊಸದಲ್ಲ. ಸಾಕಷ್ಟು ಕಾರ್ಯಕರ್ತರು ಜೈಲಿಗೆ ಹೋಗಿದ್ದಾರೆ. ಪ್ರಾಣ ಕೊಟ್ಟಿದ್ದಾರೆ. ನಾಗಮಂಗಲ ಘಟನೆ ಖಂಡಿಸಿ ನಾವು ಹೇಳಿಕೆ ಕೊಟ್ಟಿದ್ದೇವೆ. ಇದಕ್ಕೆ ಆತ ಬಿ.ಸಿ ರೋಡಿಗೆ ಬಾ ಎಂದಿದ್ದ. ಅದಕ್ಕೆ ನಾವು ಇಲ್ಲಿ ಉತ್ತರ ನೀಡಿದ್ದೇವೆ ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ.
ನಾಗಮಂಗಲ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಹಿಂದೂಗಳು ಮನಸ್ಸು ಮಾಡಿದರೆ ಈ ಬಾರಿ ಈದ್ ಮೆರವಣಿಗೆ ಅಸಾಧ್ಯ ಎಂದು ಶರಣ್ ಪಂಫ್ ವೆಲ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಮಹಮ್ಮದ್ ಶರೀಫ್, ತಾಕತ್ತಿದ್ದರೆ ಬಿ.ಸಿ ರೋಡಿಗೆ ಬನ್ನಿ ಎಂದಿದ್ದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಇಂದು ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದಾರೆ.
ಭಜರಂಗದಳ, ವಿಹೆಚ್ ಪಿ(VHP) ಸಂಘಟನೆಗಳ ಮುಖಂಡ ಪುನೀತ್ ಅತ್ತಾವರ, ಭಾಸ್ಕರ್ ಧರ್ಮಸ್ಥಳ, ಭುಜಂಗ್ ಕುಲಾಲ್, ಪ್ರಸಾದ್ ಕುಮಾರ್ ರೈ, ಮಿಥುನ್ ಕಲ್ಲಡ್ಜ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಸ್ಥಳದಿಂದ ಹೊರಡಿರಿ ಎಂದು ಪೊಲೀಸರು ಹೇಳಿದರು. ಪ್ರತಿಭಟನೆ ಮುಂದುವರೆದಿದೆ.