ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಂಶೋಧನೆ ಮತ್ತು ತೆರಬೇತಿ ಇಲಾಖೆ, ಬೆಂಗಳೂರು ಹಾಗೂ ವಿಜಯಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ 2025-26ನೇ ಸಾಲಿನ ಜಿಲ್ಲಾ ಮಟ್ಟದ ಜಾನಪದ ನೃತ್ಯ ಮತ್ತು ಪಾತ್ರಾಭಿನಯ ಸ್ಪರ್ಧೆಗಳು ನಗರದಲ್ಲಿ ನಡೆದವು. ಜಿಲ್ಲೆಯಿಂದ 13 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಮಾದಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಗಿಡ, ಮರ ನಾಶ ಮಾಡುವುದರಿಂದ ಪರಿಸರಕ್ಕೆ ಆಗುವ ಹಾನಿಯನ್ನು, ಅದರಿಂದ ಜೀವ ಸಂಕುಲ ಎದುರಿಸುವ ದುಷ್ಪರಿಣಾಮ ಕುರಿತು ಮನಮುಟ್ಟುವಂತೆ ಗೀತೆಯೊಂದಿಗೆ ನೃತ್ಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ವಿದ್ಯಾರ್ಥಿನಿಯರಾದ ಪೂಜಾ ಉಪ್ಪಾರ, ಶಾಂಭವಿ ದೇವದುರ್ಗ, ಸುಚಿತ್ರಾ ಡೂಗೂರ, ಜಯಶ್ರೀ ರಾಠೋಡ, ವೈಶಾಲಿ ರಾಮನಳ್ಳಿ ಮತ್ತು ಸಿದ್ದಮ್ಮ ಮಾಲ್ದ ಭಾಗವಹಿಸಿದ್ದರು. ಶಾಲೆಯ ಶಿಕ್ಷಕಿ ಗಿರಿಜಾ ವಿ.ಅಳ್ಳಗಿ ನೃತ್ಯ ಸಂಯೋಜನೆ ಮಾಡಿದ್ದಾರೆ.
ವಿದ್ಯಾರ್ಥಿಗಳು ರಾಜ್ಯ ಮಟ್ಕಕ್ಕೆ ಆಯ್ಕೆ ಆಗಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಚ್.ಬಿರಾದಾರ, ಶಿಕ್ಷಕರಾದ ರಾಚು ಕೊಪ್ಪಾ, ಎಸ್.ಎಸ್.ವಾಲಿಕಾರ, ಪಿ.ಎಸ್.ವಾಲಿ, ಎಸ್.ಎನ್.ಮಲಘಾಣ, ಎಸ್.ಎನ್.ಮುದ್ದೇಬಿಹಾಳ, ಆರ್.ಕೆ.ಹಳ್ಳಿಕೊಪ್ಪದಮಠ, ಎಮ್.ಜೆ.ಬಾಗವಾನ, ಜೆ.ಜಿ.ಜೋಷಿ, ಅನಿತಾ ರಾಯಗೊಂಡ, ಬಸವರಾಜ ಜೇರಟಗಿ, ಸಿ.ಎಮ್.ಕಾಸಾರ, ಎಸ್.ಡಿಎಂಸಿ ಅಧ್ಯಕ್ಷ ದಿಂಗಬರ ನಾಟಿಕಾರ, ಉಪಾಧ್ಯಕ್ಷ ಕೇದಾರ ಮಂಕಣಿ ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.




