ಪ್ರಜಾಸ್ತ್ರ ಸುದ್ದಿ
ಇಂದೋರ್: ಬಿಸ್ಕತ್ ಪ್ಯಾಕೆಟ್ ಗಳಲ್ಲಿ ಪಾಕ್ ಧ್ವಜದ ಬಲೂನ್ ಪತ್ತೆಯಾಗಿದೆ. ರಾಜಸ್ತಾನದ ಝಾಲಾವರ್ ನ ಅಂಗಡಿಯೊಂದರಲ್ಲಿ ಈ ರೀತಿಯ ಬಲೂನ್ ಪತ್ತೆಯಾಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಯವನನ್ನು ವಿಚಾರಿಸಿದಾಗ ರತ್ಲಂ ಜಿಲ್ಲೆಯ ಆಲೋಟ ಪಟ್ಟಣದಲ್ಲಿನ ಸಗಟು ವ್ಯಾಪಾರಿ ಪೂರೈಕೆ ಮಾಡಿರುವುದಾಗಿ ತಿಳಿದು ಬಂದಿದೆ.
ಬೂಲನ್ ಮೇಲೆ ಆಗಸ್ಟ್ 14 ಎಂದು ಹಾಗೂ ಉರ್ದು ಅಕ್ಷರದ ಬರಹವನ್ನು ಮುದ್ರಿಸಲಾಗಿದೆ. ಬಿಸ್ಕತ್ ಪೂರಕೆ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಂದೋರ್ ನ ಮಾರಾಟಗಾರರೊಬ್ಬರಿಂದ ಬಲೂನ್ ಖರೀದಿಸಿರುವುದಾಗಿ ಹೇಳಿದ್ದಾನಂತೆ. ಹೀಗಾಗಿ ರಾಜಸ್ತಾನ್ ಹಾಗೂ ಮಧ್ಯಪ್ರದೇಶದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಇದರ ಜಾಡು ಪತ್ತೆಯಾಗಬೇಕಿದೆ.