ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಜಗಳವಾಡಿಕೊಂಡು ತವರು ಮನೆಗೆ ಬಂದಿದ್ದ ಹೆಂಡ್ತಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಗಂಡನನ್ನು ಆಕೆಯ ಸಹೋದರ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಆನಂದ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಟೋನಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಗಾಜಿಪುರದ ಸ್ನೇಹಾ ಎನ್ನುವ ಯುವತಿಯನ್ನು ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮುಂದೆ ಅವರಿಬ್ಬರ ನಡುವೆ ಜಗಳವಾಗಿದೆ. ಹೀಗಾಗಿ ತವರು ಮನೆಗೆ ಬಂದಿದ್ದಳು. ಆನಂದ ತನ್ನ ಅಣ್ಣನ ಮದುವೆಗಾಗಿ ಪತ್ನಿ ಸ್ನೇಹಗಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾನೆ. ಆಗ ಸ್ನೇಹಳ ಸಹೋದರಿ ಟೋನಿ ಹಾಗೂ ಸ್ನೇಹಿತರು ಸೇರಿ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆನಂದನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.