ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ನಗರದಲ್ಲಿ ಸಿಸಿಬಿ ಪೊಲೀಸರು 6 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. 6 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಲಾಗಿದೆ. ಬಂಧಿತರಿಂದ 3 ಕೆಜಿ 330 ಗ್ರಾಂ ಗಾಂಜಾ, 278 ಗ್ರಾಂ ಎಂಡಿಎಂಎ, ಬೈಕ್, 3 ಮೊಬೈಲ್ ಫೋನ್ ಸೇರಿ ನಗದು ವಶಪಡಿಸಿಕೊಂಡಿದ್ದಾರೆ.
ಆರ್.ಟಿ ನಗರ, ಜೆ.ಸಿ ನಗರ, ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅಪರಿಚಿತ ವ್ಯಕ್ತಿಗಳು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿ, ಜಾಲಹಳ್ಳಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಉಳಿದವರನ್ನು ಬಂಧಿಸಿದ್ದಾರೆ.