ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ ನೇಪಾಳ ಮೂಲದ ಕುಟುಂಬದ ಯುವತಿಯ(Girl) ಅತ್ಯಂತ ಭಯಾನಕ ಹತ್ಯೆಗೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯುವತಿ ಮಹಾಲಕ್ಷ್ಮಿಯನ್ನು ಹತ್ಯೆ(Murder) ಮಾಡಿದ ಕ್ರೂರಿಗಳ ಇವರು ಮನುಷ್ಯರು ಆಗಿರಲು ಸಾಧ್ಯವೇ ಇಲ್ಲ ಎನ್ನವಂತಿದೆ. ಯಾಕಂದರೆ ಮೊದಲು 30 ತುಂಡುಗಳನ್ನಾಗಿ ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಭಾನುವಾರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದ್ದು 50 ತುಂಡುಗಳನ್ನಾಗಿ ಮಾಡಲಾಗಿತ್ತು ಎನ್ನುವುದು. ಈ ದೃಶ್ಯ ನೋಡಿದ ಪೊಲೀಸರು, ವೈದ್ಯರು ಸೇರಿದಂತೆ ಅನೇಕರು ಅದರಿಂದ ಹೊರ ಬರಲು ಆಗುತ್ತಿಲ್ಲವೆಂದು ಹೇಳಲಾಗುತ್ತಿದೆ.
ಮಹಾಲಕ್ಷ್ಮಿ ಕುಟುಂಬ ನೇಪಾಳದಿಂದ(Nepal) ಸುಮಾರು 35 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದೆ. ಇವರು ನಾಲ್ಕು ಮಂದಿ ಮಕ್ಕಳು. ಮೊದಲ ಮಗಳು ಲಕ್ಷ್ಮಿ ನೆಲಮಂಗಲದ ಸೈಯದ್ ಇಮ್ರಾನ್ ಎಂಬುವನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಎರಡನೇ ಮಗಳು ಮಹಾಲಕ್ಷ್ಮಿ ಹೇಮಂತ್ ದಾಸ್ ಎಂಬುವರೊಂದಿಗೆ ಮದುವೆಯಾಗಿದ್ದಳು. ಇವರಿಗೆ ಒಂದು ಹೆಣ್ಣು ಮಗುವಿದೆ. ಹುಕ್ಕುಂಸಿಗ್ ತನ್ನ ಪತ್ನಿಯೊಂದಿಗೆ ಮಾರತಹಳ್ಳಿಯಲ್ಲಿ ವಾಸವಾಗಿದ್ದಾನೆ. ಕೊನೆಯ ಮಗ ನರೇಶ್ ಹೆತ್ತವರೊಂದಿಗೆ ಇದ್ದಾನೆ. ಈ ಹಿಂದೆ ಮಹಾಲಕ್ಷ್ಮಿ ಮನೆಯಲ್ಲಿ ಸಹೋದರ ಹುಕ್ಕಂಸಿಂಗ್, ಪತ್ನಿ ದೀಪಿಕಾ ಸುಮಾರು 15 ದಿನ ವಾಸವಾಗಿದ್ದರು. ಇವರ ನಡುವೆ ಜಗಳ ಬಂದಿದೆ. ಅಂದಿನಿಂದ ಮಹಾಲಕ್ಷ್ಮಿ ಒಂಟಿಯಾಗಿ ವಾಸವಾಗಿದ್ದರು.
ಪತಿಯಿಂದ ದೂರವಿದ್ದ ಮಹಾಲಕ್ಷ್ಮಿ ಮಾಲ್(Mall) ನಲ್ಲಿ ಗಾರ್ಮೆಂಟ್ಸ್ ಸೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಉತ್ತರಾಖಂಡದ ವ್ಯಕ್ತಿಯೊಂದಿಗೆ ಈಕೆ ಸಲುಗೆಯಿಂದ ಇದ್ದಳು. ಇವನು ಸಹ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಈ ಹಿಂದೆ ಪತಿ ಈ ಬಗ್ಗೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಮೆನ್ಸ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೂ ಸಲುಗೆಯಿಂದ ಇದ್ದಳಂತೆ. ಆತ ಸೆಪ್ಟೆಂಬರ್ ಮೊದಲ ವಾರದಿಂದಲೇ ನಾಪತ್ತೆಯಾಗಿದ್ದಾನೆ. ಎಫ್ಐಆರ್ ನಲ್ಲಿ ಯಾರ ಹೆಸರು ಉಲ್ಲೇಖ ಮಾಡಿಲ್ಲ. ನಾಲ್ವರ ವಿರುದ್ಧ ಶಂಕೆ ವ್ಯಕ್ತಪಡಿಸಲಾಗಿದೆ. ಇದಕ್ಕಾಗಿ 6 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಹಂತಕರನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಗಂಡ, ಮಕ್ಕಳು, ಹೆತ್ತವರಿಂದ ದೂರುವಿದ್ದ ಏಕಾಂಗಿಯಾಗಿ ಬದುಕಲು ಹೋಗಿ ದಾರಿ ತಪ್ಪುವ ಹೆಣ್ಮಕ್ಕಳ ಸ್ಥಿತಿ ನೆನಸಿಕೊಂಡರೆ ಭಯವಾಗುತ್ತಿದೆ.