ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ಯುವತಿಯ ಭೀಕರ ಕೊಲೆ ನಡೆದಿದೆ. ಈ ಮೂಲಕ ಇಂತಹ ಅಪರಾಧಿ ಕೃತ್ಯಗಳನ್ನು ಎಸಗುವವರಿಗೆ ಯಾವುದೇ ಭಯ ಇಲ್ಲದಾಗಿದೆ. ವೈಯಾಲಿಕಾವಲ್(Vyalikaval )ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಹತ್ತಿರ ಯುವತಿಯನ್ನು ಕೊಲೆ ಮಾಡಿ 30 ತುಂಡುಗಳನ್ನಾಗಿ(Chopped body) ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದು, ದೆಹಲಿಯ ಯುವತಿ ಶ್ರದ್ಧಾ ವಾಕರ್ ಮಾದರಿಯಲ್ಲಿ ಈ ಕೃತ್ಯ ನಡೆದಿದೆ.
ಮೃತ ಯುವತಿಯನ್ನು ಛತ್ತೀಸಗಡ ಅಥವ ಪಶ್ಚಿಮ ಬಂಗಾಳ ಮೂಲದ ಸುಮಾರು 25 ರಿಂದ 26 ವರ್ಷದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಈ ಕೃತ್ಯ ನಡೆದು ಸುಮಾರು 15 ದಿನಗಳಾಗಿದೆ ಎಂದು ಶಂಕಿಸಲಾಗಿದೆ. ಗಂಡನಿಂದ ದೂರವಾದ ಯುವತಿ ಇಲ್ಲಿಯೇ ಒಬ್ಬಳೆ ವಾಸವಾಗಿದ್ದಳಂತೆ. ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ ಮೃತದೇಹವನ್ನು(Dead Body) ತುಂಡುಗಳನ್ನಾಗಿ ಮಾಡಿ ಇಡಲಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರಲು ಶುರುವಾಗಿದೆ. ಹೀಗಾಗಿ ಅಕ್ಕಪಕ್ಕದ ಮನೆಯವರು ಸಂಬಂಧಿಕರಿಗೆ ಫೋನ್ ಮಾಡಿ ಹೇಳಿದ್ದಾರೆ. ತಾಯಿ, ಸಹೋದರ ಬಂದು ಮನೆಯ ಬೀಗ ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗಂಡನ ದೂರವಾದ ಯುವತಿ ಒಬ್ಬಳೆ ಬೆಂಗಳೂರಲ್ಲಿ ವಾಸವಾಗಿದ್ದಳು. ಎರಡ್ಮೂರು ತಿಂಗಳ ಹಿಂದೆ ಇಲ್ಲಿಗೆ ಬಾಡಿಗೆಗೆ ಬಂದಿದ್ದಳು. ಪಿಕಪ್, ಡ್ರಾಪ್ ಎಂದು ಯವಕನೊಬ್ಬ ಬರುತ್ತಿದ್ದ. ಆತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಮನುಷ್ಯರನ್ನು ಹತ್ಯೆ(Murder) ಮಾಡಿ ತುಂಡು ತುಂಡಾಗಿ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎನ್ನುವ ಭಯ ಹುಟ್ಟಿದೆ.




