ಪ್ರಜಾಸ್ತ್ರ ಸುದ್ದಿ
ಢಾಕಾ(Dhaka): ನಾಗರಿಕ ಸೇವೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಮೀಸಲಾತಿ ವಿರೋಧಿಸಿ ಜುಲೈನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಇಂದು ಹಿಂಸಾಸ್ವೂರಪ(bangladesh unrest) ಪಡೆದುಕೊಂಡಿದೆ. ಇದುವರೆಗೂ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸೋಮವಾರ ಪ್ರಧಾನಿ ಶೇಖ್ ಹಸೀನಾ(sheikh hasina) ಅವರು ರಾಜೀನಾಮೆ ಸಲ್ಲಿಸಿ ದೇಶ ತೊರೆಯುತ್ತಿದ್ದಂತೆ ಇತ್ತ ಪ್ರತಿಭಟನೆ ದಂಗೆ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿಯವರ ಅಧಿಕೃತ ಮನೆ ದರೋಡೆ ಮಾಡಲಾಯಿತು. ಈಗ ಹಿಂದೂ ಕ್ರಿಶ್ಚಿಯನ್, ಬೌದ್ಧ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಹಿಂದೂ(Hindu) ಬುದ್ಧಿಸ್ಟ್ ಕ್ರಿಶ್ಚಿಯನ್ ಏಕತಾ ಪರಿಷತ್ತಿನ ನಾಯಕ ಕಜೋಲ್ ದೇವನಾಥ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ದೇವಸ್ಥಾನಗಳ ನಾಶ, ಅಂಗಡಿಗಳನ್ನು ಲೂಟಿ ಮಾಡುತ್ತಿದ್ದಾರೆ. ಶೇಖ್ ಹಸೀನಾ ಅವರ ಅವಾಮಿ ಲೀಗ್( awami league) ಪಕ್ಷದಲ್ಲಿದ್ದ ಇಬ್ಬರು ಹಿಂದೂ ನಾಯಕರನ್ನು ಸಿರಾಜ್ ಗಂಜ್ ಹಾಗೂ ರಂಗಪುರದಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸಧ್ಯ ಇಲ್ಲಿ ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರ ರಚಿಸಿದ್ದಾರೆ.