ಪ್ರಜಾಸ್ತ್ರ ಸುದ್ದಿ
ಢಾಕಾ(Dakha): ಬಾಂಗ್ಲಾ ವಾಯುಪಡೆ ತರಬೇತಿ ವಿಮಾನ ಶಾಲೆಯ ಆವರಣದಲ್ಲಿ ಪತನಗೊಂಡಿದ್ದು, 19 ಜನರು ಮೃತಪಟ್ಟಿದ್ದಾರೆ. ವಾಯುಪಡೆಯ ಎಫ್-7-ಬಿಜಿಐ ತರಬೇತಿ ವಿಮಾನ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಪತನಗೊಂಡಿದೆ ಎಂದು ಸೇನೆ ತಿಳಿಸಿದೆ. ಘಟನೆಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 12ರಂದು ಭಾರತದ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 241 ಪ್ರಯಾಣಿಕರು, 19 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದರು.