ಪ್ರಜಾಸ್ತ್ರ ಸುದ್ದಿ
ಬಂಟ್ವಾಳ(Bantwal): ಪತ್ನಿಯ ಮೃತದೇಹ ಬೆಡ್ ರೂಮಿನ ಬೆಡ್ಡಿನ ಕೆಳಗೆ ಪತ್ತೆಯಾಗಿದೆ. ಪತಿಯ ಮೃತದೇಹ ನೇಣು ಬೀಗದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುರವಾರ ಬೆಳಕಿಗೆ ಬಂದಿದೆ. ನಾವೂರ ಗ್ರಾಮದ ಬಡಗುಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಮ್ಮಪ್ಪ ಮೂಲ್ಯ ಹಾಗೂ ಪತ್ನಿ ಜಯಂತಿ ಮೃತ ದುರ್ದೈವಿಗಳು. ಬಂಟ್ವಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ.
ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಿರುವಾಗ ಎಲ್ಲರಿಗೂ ಖುಷಿಯಾಗುವಂತೆ ಜಯಂತಿ ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯಕ್ರಮ ಮಾಡಲು ದಿನಾಂಕ ಸಹ ನಿಗದಿ ಮಾಡಲಾಗಿತ್ತು. ಆದರೆ, ಈಗ ನೋಡಿದರೆ ಎಲ್ಲರಿಗೂ ಬರಸಿಡಿಲು ಬಡಿದಂತಾಗಿದೆ. ಮೃತ ಜಯಂತಿ ಕುತ್ತಿಗೆ ಬಳಿ ಗಾಯದ ಗುರುತುಗಳಿವೆ ಎಂದು ಹೇಳಲಾಗುತ್ತಿದೆ. ದಂಪತಿಯ ಸಾವು ಹೇಗಾಯ್ತು ಅನ್ನೋ ಹಲವು ಪ್ರಶ್ನೆಗಳಿದ್ದು, ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.