ಪ್ರಜಾಸ್ತ್ರ ಸುದ್ದಿ
ಲಂಡನ್(Londan): ಕನ್ನಡದ ಖ್ಯಾತ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಅನುವಾದಿತ ಕೃತಿಗೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರಶಸ್ತಿ ಬಂದಿದೆ. 50 ಸಾವಿರ ಪೌಂಡ್(ಅಂದಾಜು 57.28 ಲಕ್ಷ ರೂಪಾಯಿ) ನಗದು ಬಹುಮಾನ ಹೊಂದಿದೆ.
1990ರಿಂದ 2023ರ ನಡುವೆ ಬರೆದ 12 ಕಥೆಗಳನ್ನು ದೀಪಾ ಭಸ್ತಿ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮಾಜದ ಹೆಣ್ಮಕ್ಕಳ ನಿತ್ಯದ ಬದುಕು ಇಲ್ಲಿನ ಕಥೆಗಳಲ್ಲಿವೆ. ಟೇಟ್ ಮಾಡರ್ನ್ ನಲ್ಲಿ ನಡೆದ ಸಮಾರಂಭದಲ್ಲಿ ಲೇಖಕಿ ಬಾಣು ಮುಷ್ತಾಕ್ ಅವರು ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಾಹಿತ್ಯ ವಲಯದ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.