ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿರುವುದನ್ನು ವಿಜಯಪುರ ಜಿಲ್ಲೆಯ ಯುವಾ ಬ್ರಿಗೇಡ್ ಸಿಂದಗಿ ವತಿಯಿಂದ ಖಂಡಿಸಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ನಿರ್ದೇಶನ ನೀಡಬೇಕೆಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ದಸರಾ ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಗುರುತು. ನಮ್ಮ ಪರಂಪರೆಯ ಪ್ರತೀಕವಾದ ದಸರಾ ಹಬ್ಬದಲ್ಲೂ ರಾಜಕೀಯ ತಂದು ಹಿಂದೂಗಳ ಭಾವನೆಗೆ ದಕ್ಕೆ ತರುವ ಹಕ್ಕು ಹಾರಿಗೂ ಇಲ್ಲ. ಹಿಂದೂಗಳ ಶ್ರದ್ಧಾ ಭಾವನೆಯನ್ನು ಒಪ್ಪದ, ಗೌರವಿಸದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನೇರವಾಗಿ ಜನರ ಹೃದಯಕ್ಕೆ ಹೊಡೆತ ಕೊಟ್ಟಿದೆ ಎಂದು ಮನವಿ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ವಿಭಾಗ ಸಂಚಾಲಕ ರಾಜು ಪಾಟೀಲ, ವಿಭಾಗ ಸಹ ಸಂಚಾಲಕ ಶಿವು ಕಾಟಕರ, ವಿಹೆಚ್ ಪಿ ಮುಖಂಡ ಶೇಖರಗೌಡ ಹರನಾಳ, ಜಿಲ್ಲಾ ಸಂಚಾಲಕ ಮಡಿವಾಳ ವಾಲಿಕಾರ, ಸಿಂದಗಿ ತಾಲೂಕು ಸಂಚಾಲಕ ನಿಂಗರಾಜ ಪಾಟೀಲ, ಆಕಾಶ ಕುಂಬಾರ, ಮೌನೇಶ ಭಜಂತ್ರಿ, ಪ್ರೀತಮ್, ಶ್ರೀನಿವಾಸ ನಾವಿ ಸೇರಿ ಅನೇಕರು ಉಪಸ್ಥಿತಿತರಿದ್ದರು.