ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದ ಐತಿಹಾಸಿಕ ಬಸವಣ್ಣ ದೇವರ ಜಾತ್ರಾ ಮಹೋತ್ಸದ ನಿಮಿತ್ಯವಾಗಿ ಶನಿವಾರ ಸಂಜೆ ಅದ್ಧೂರಿ ರಥೋತ್ಸವ ನೆರವೇರಿತು. ಯುಗಾದಿ ಹಬ್ಬದ ಮರುದಿನದಿಂದ ಜಾತ್ರೆಯ ತಯಾರಿಗಳು ನಡೆಯುತ್ತವೆ. 9 ದಿನಗಳ ಕಾಲ ನಿತ್ಯ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತವೆ.
ಶನಿವಾರ ಸಂಜೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಬೃಹತ್ ತೇರನ್ನು ಎಳೆಯಲಾಯಿತು. ಮಾರ್ಚ್ 1ರ ತನಕ ಜಾತ್ರೆ ನಡೆಯಲಿದೆ. ಈ ವೇಳೆ ಪುರಾಣ, ಕುಸ್ತಿ, ಪಟಾಕಿ ಸುಡುವುದು, ನಾಟಕ ಪ್ರದರ್ಶನ, ಅನ್ನ ಪ್ರಸಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತೆ. ಜಾತ್ರೆಯಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಸುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ.




