ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಸದನದಲ್ಲಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಧ್ಯಕ್ಕೆ ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ. ರಾಜ್ಯಪಾಲರು, ಸಚಿವರು, ಸಾಹಿತಿಗಳು ಮಾತನಾಡಿದ್ದಾರೆ. ಮಾರ್ಚ್ 27ರಂದು ಚರ್ಚಿಸಿ ತೀರ್ಮಾನ ಮಾಡೋಣ ಎಂದಿದ್ದಾರೆ. ಹೀಗಾಗಿ ರಾಜೀನಾಮೆ ಕೈ ಬಿಟ್ಟಿದ್ದೇನೆ. ಎಲ್ಲರೂ ರಾಜೀನಾಮೆ ಕೊಡಬೇಡಿ ಎನ್ನುತ್ತಿದ್ದಾರೆ ಎಂದರು.
ಈ ಹಿಂದೆ ಇಂತಹ ಘಟನೆ ನಡೆದಿಲ್ಲ. ಬಜೆಟ್ ಮೇಲೆ ಮುಖ್ಯಮಂತ್ರಿಗಳು ಮಾತನಾಡಿದ ಬಳಿಕ ಹನಿಟ್ರ್ಯಾಪ್ ವಿಚಾರದ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಹೇಳಿದೆ. ಆದರೂ ಗದ್ದಲ ಮಾಡಲಾಯಿತು. ಇದರ ನಡುವೆ ಬಿಲ್ ಪಾಸ್ ಆಯ್ತು. ಚರ್ಚೆಯಿಲ್ಲದೆ ಈ ರೀತಿ ಬಿಲ್ ಪಾಸ್ ಆಗಬಾರದು. ಇದರಿಂದ ಜನರಿಗೆ ಮೋಸ ಮಾಡಿದ್ದಂತೆ. ಹೀಗಾಗಿ ನನಗೆ ಬೇಸರವಾಗಿದೆ. ಮಾರ್ಚ್ 27ರ ನಂತರ ಎಲ್ಲ 75 ಸದಸ್ಯರಿಗೆ ಪತ್ರ ಕಳಿಸುತ್ತೇನೆ. ಯಾರು ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆ ಇದೆ ಎಂದರು.