ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ನಾನು ಕುಮಾರಸ್ವಾಮಿಯೊಂದಿಗೆ ಇದ್ದಾಗ 4 ಕೋಟಿ ರೂಪಾಯಿ ಖರ್ಚು ಮಾಡಿ, 20 ಸಾವಿರ ಮತಗಳಿಂದ ಚನ್ನಪಟ್ಟಣದಲ್ಲಿ ಗೆಲ್ಲಿಸಿಕೊಂಡು ಬಂದಿದ್ದೆ. ಮುಸ್ಲಿಂರು ಇರದಿದ್ದರೆ ಜೆಡಿಎಸ್ ಗೆ ಒಂದು ಸ್ಥಾನವೂ ಬರುವುದಿಲ್ಲ. 19 ಜನ ಗೆದ್ದಿದ್ದು ಸಹ ಮುಸ್ಲಿಂರಿಂದ ಎಂದು ಮಾಜಿ ಸಚಿವ ಸಿ.ಎಂ ಇಬ್ರಾಹಿಂ(C.M Ibrahim) ವಾಗ್ದಾಳಿ ನಡೆಸಿದರು. ಅದನ್ನು ಜೆಡಿಎಸ್ ಪರಿಸ್ಥಿತಿ ಈಗ ಬಸ್ ಸ್ಟ್ಯಾಂಡ್ ನಲ್ಲಿ ನಿಂತ ಬಸವಿ ತರ ಆಗಿದೆ ಎಂದು ಕಟು ಟೀಕೆ ಮಾಡಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಲ್ಲಿ(JDS) ಬೆಂಕಿ ಬಿದ್ದಾಗಿದೆ. ಒಬ್ಬೊಬ್ಬರೆ ತಮ್ಮ ಕ್ಷೇತ್ರ ಕಾಪಾಡಿಕೊಳ್ಳಬೇಕು. ಕುಮಾರಸ್ವಾಮಿ ಪಕ್ಷವನ್ನು ಬರೀ ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ನಾವು ತೃತೀಯ ರಂಗಸ್ಥಾಪನೆ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ. ಅದಕ್ಕೆ ಬೇರೆ ಹೆಸರು ಇಡಬೇಕಾ ಅಥವ ಜೆಡಿಎಸ್ ಹೆಸರಿನೊಂದಿಗೆ ಮುಂದುವರೆಯಬೇಕು ಎನ್ನುವುದು ಚರ್ಚೆ ನಡೆಸುತ್ತೇವೆ ಎಂದು ಹೇಳುವ ದಳದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ ಎಂದರು.