ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹುಡುಗಿಯ ಹಿಂದೆ ಹೋಗಿ ಮೋಸ ಹೋದವರ, ಹೋಗುವರ ಸಂಖ್ಯೆ ಏನೂ ಕಡಿಮೆಯಿಲ್ಲ. ಇದಕ್ಕೆ ರಾಜಕೀಯ ನಾಯಕರು ಹೊರತಾಗಿಲ್ಲ. ಇದೀಗ ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಹನಿ ಟ್ರ್ಯಾಪ್ ಬಲೆಗೆ ಬಿದ್ದಿದ್ದಾನೆ. ಚೆಲುವೆ ಹಿಂದೆ ಹೋಗಿ ಮೈಮರೆತ ಅಣ್ಣಪ್ಪಸ್ವಾಮಿಗೆ 20 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿದೆ. ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿದ ತುಮಕೂರಿನ ಕ್ಯಾತ್ಸಂದ್ರದ ನಿಶಾ ಎನ್ನುವ ಯುವತಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಫೇಸ್ ಬುಕ್ ಮೂಲಕ ಅಣ್ಣಪ್ಪಸ್ವಾಮಿಯನ್ನು ಪರಿಚಯ ಮಾಡಿಕೊಂಡಿದ್ದಾಳೆ. ಇಬ್ಬರ ನಡುವೆ ಮೆಸೇಜ್ ಶುರುವಾಗಿದೆ. ಇವನು ಸಹ ಹುಡುಗಿ ತಾನೆಗಿಯೇ ಹಿಂದೆ ಬಿದ್ದಿದ್ದಾಳೆ ಎಂದು ಜೊಲ್ಲು ಸುರಿಸಿಕೊಂಡು ಹಿಂದೆ ಹೋಗಿದ್ದಾನೆ. ಮುಂದೆ ದೊಡ್ಡಬಳ್ಳಾಪುರದ ಲಾಡ್ಜ್ ವೊಂದರಲ್ಲಿ ಇಬ್ಬರು ಸೇರಿದ್ದಾರೆ. ಇದರ ವಿಡಿಯೋ ಮಾಡಿಕೊಂಡಿದ್ದ ನಿಶಾ ತನ್ನ ಇಬ್ಬರ ಪರಿಚಯಸ್ಥ ಹುಡುಗರ ಮೂಲಕ ಬ್ಲ್ಯಾಕ್ ಮೇಲ್ ಶುರು ಮಾಡಿದ್ದಾಳೆ. 20 ಲಕ್ಷ ರೂಪಾಯಿ ಕೊಡದೆ ಇದ್ದರೆ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದಾಳೆ.
ನಿಶಾ ಜೊತೆಗೆ ಗುಬ್ಬಿಯ ಭರತ್, ಬಿಳೇಕಲ್ ಪಾಳ್ಯದ ಬಸವರಾಜು ಪದೆಪದೆ ಅಣ್ಣಪ್ಪಸ್ವಾಮಿ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದೆ ಇದ್ದರೆ ಅತ್ಯಾಚಾರದ ಕೇಸ್ ಮಾಡುವುದಾಗಿಯೂ ಹೆದರಿಸಿದ್ದಾರೆ. ಇದರಿಂದ ಹೈರಾಣಾಗಿ ಹೋದ ಅಣ್ಣಪ್ಪಸ್ವಾಮಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ಹೆಣ್ಣಿನ ಮೋಹಕ್ಕೆ ಸಿಲುಕಿ ಮಾಡಬಾರದ ಕೆಲಸ ಮಾಡಿ ಕಂಗಾಲಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕಿ ನಿಶಾಳನ್ನು ಬಂಧಿಸಿದ್ದಾರೆ. ಭರತ್ ಹಾಗೂ ಬಸವರಾಜು ಬಂಧನಕ್ಕೆ ಬಲೆ ಬೀಸಲಾಗಿದೆ.