Ad imageAd image

ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ತೆಕ್ಕೆಗೆ

Nagesh Talawar
ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ತೆಕ್ಕೆಗೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಮಹಾನಗರ ಪಾಲಿಕೆಯ 24ನೇ ಅವಧಿಯ ಚುನಾವಣೆಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಕನ್ನಡಿಗರ ಪಾಲಾಗಿದೆ. ಮೇಯರ್ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 21ನೇ ವಾರ್ಡ್ ಬಿಜೆಪಿ ಸದಸ್ಯೆ ಪ್ರೀತಿ ವಿನಾಯಕ ಕಾಮಕರ ಹಾಗೂ 46ನೇ ವಾರ್ಡ್ ನ ಬಿಜೆಪಿ ಸದಸ್ಯ ಹಣಮಂತ ಕೊಂಗಾಲಿ ಉಪ ಮೇಯರ್ ಆಗಿ ಆಯ್ಕೆ ಆದರು.

ಪ್ರೀತಿ ಕಾಮಕರ ಪರವಾಗಿ 39 ಮತಗಳು, 18 ಮತಗಳು ವಿರೋಧವಾಗಿ ಬಿದ್ದವರು. ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಖರ್ಷಿದಾ ದಾದಾಪೀರ್ ಮುಲ್ಲಾ ಪರವಾಗಿ 29 ಹಾಗೂ ವಿರೋಧವಾಗಿ 39 ಮತಗಳು ಬಿದ್ದವು. ಇನ್ನು ಉಪ ಮೇಯರ್ ಸ್ಥಾನಕ್ಕೆ ಹಣಮಂತ ಕೊಂಗಾಲಿ ಪರವಾಗಿ 39, ವಿರೋಧವಾಗಿ 20 ಮತಗಳು ಬಿದ್ದವು. ಕಾಂಗ್ರೆಸ್ಸಿನ ಮೋದಿನಸಾಬ್ ಪರವಾಗಿ 20, ವಿರೋಧವಾಗಿ 39 ಮತಗಳು ಬಿದ್ದವು. ಈ ಚುನಾವಣೆಯಲ್ಲಿ 6 ಸದಸ್ಯರು ಗೈರಾಗಿದ್ದರು. ಎರಡೂ ಸ್ಥಾನಗಳು ಬಿಜೆಪಿ ಪಡೆದುಕೊಂಡಿದೆ.

WhatsApp Group Join Now
Telegram Group Join Now
Share This Article