ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕ್ಕೆ ಬಿದ್ದು ಐವರು ಯೋಧರು ಹುತಾತ್ಮರಾಗಿದ್ದು, ಅದರಲ್ಲಿ ಮೂವರು ಕರ್ನಾಟಕದವರಿದ್ದಾರೆ. ಒಬ್ಬರು ಬೆಳಗಾವಿ ಜಿಲ್ಲೆಯವರಿದ್ದಾರೆ. ಇದರ ನಡುವೆ ಮಣಿಪುರದಲ್ಲಿಯೂ ಇದೇ ರೀತಿ ಅಪಘಾತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಸಹ ಹುತಾತ್ಮರಾಗಿದ್ದಾರೆ.
ಧರ್ಮರಾಜ ಸುಭಾಷ ಖೋತ್(42) ಹುತಾತ್ಮ ಯೋಧ ಎಂದು ತಿಳಿದು ಬಂದಿದೆ. ಆರು ಯೋಧರು ಕತ್ಯವ್ಯ ಮುಗಿಸಿಕೊಂಡು ಬರುತ್ತಿದ್ದಾಗ ಇಂಪಾಲ್ ಜಿಲ್ಲೆಯ ಬೊಂಬಾಲಾ ಪ್ರದೇಶದ ಕಣಿವೆಯಲ್ಲಿ ಭೂಕುಸಿತವಾಗಿ ವಾಹನ ಕಂದಕಕ್ಕೆ ಉರುಳಿದೆ. ಯೋಧ ಧರ್ಮರಾಜ ಮೃತಪಟ್ಟಿದ್ದು, ಉಳಿದವರು ಗಾಯಗೊಂಡಿದ್ದಾರೆ.