Ad imageAd image

ಬೆಳಗಾವಿ: ಹಳಿ ತಪ್ಪಿದ ಗೂಡ್ಸ್ ರೈಲು

Nagesh Talawar
ಬೆಳಗಾವಿ: ಹಳಿ ತಪ್ಪಿದ ಗೂಡ್ಸ್ ರೈಲು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಗೂಡ್ಸ್ ರೈಲೊಂದು ಹಳಿ ತಪ್ಪಿ ಬಿದ್ದ ಘಟನೆ ನಗರದ ಹೊರವಲಯದಲ್ಲಿ ಮಂಗಳವಾರ ನಡೆದಿದೆ. ಜಿಂದಾಲ್ ಕಾರ್ಖಾನೆಗೆ ಅದಿರು ತುಂಬಿಕೊಂಡು ಮಿರಜ್ ಕಡೆ ಹೊರಟಿತ್ತು. ಒಂದು ಹಳಿಯಿಂದ ಮತ್ತೊಂದು ಹಳಿಗೆ ಬದಲಾಗುವ ವೇಳೆ ಈ ಅನಾಹುತ ನಡೆದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ಅಪಘಾತದಿಂದ ಬೆಳಗಾವಿ-ಮಿರಜ್ ನಡುವೆ ಸಂಚರಿಸುವ ರೈಲು ಸ್ಥಗಿತಗೊಂಡಿದ್ದು, ಕಾರ್ಯಾಚರಣೆ ಮುಗಿದ ಬಳಿಕ ಸಂಚಾರ ಪುನಃ ಪ್ರಾರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article