Ad imageAd image

ಬೆಳಗಾವಿ: ಈಗ ಪ್ಯಾಲೆಸ್ಟೀನ್ ಮಾದರಿ ಪೆಂಡಾಲ್, ಸರ್ಕಾರ ವಿಫಲ!

ರಾಜ್ಯದಲ್ಲಿ ಮೇಲಿಂದ ಮೇಲೆ ಫ್ಯಾಲೆಸ್ಟೀನ್ ಪರವಾದ ಘಟನೆಗಳು ನಡೆಯುತ್ತಿವೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದಕೊಳ್ಳದೆ

Nagesh Talawar
ಬೆಳಗಾವಿ: ಈಗ ಪ್ಯಾಲೆಸ್ಟೀನ್ ಮಾದರಿ ಪೆಂಡಾಲ್, ಸರ್ಕಾರ ವಿಫಲ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ರಾಜ್ಯದಲ್ಲಿ ಮೇಲಿಂದ ಮೇಲೆ ಫ್ಯಾಲೆಸ್ಟೀನ್(Plestine) ಪರವಾದ ಘಟನೆಗಳು ನಡೆಯುತ್ತಿವೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದಕೊಳ್ಳದೆ ಓಲೈಕೆ ರಾಜಕಾರಣ ನಡೆಸಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಈದ್(Eid Millad) ಮೆರವಣಿಗೆ ನಡೆಯುತ್ತಿದ್ದು, ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ಟೀನ್ ಧ್ವಜ ಮಾದರಿಯ ಬಣ್ಣದ ಶಾಮಿಯಾನ್ ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದರ್ಬಾರ್ ಗಲ್ಲಿಯಲ್ಲಿ ಅರ್ಧ ಕಿಲೋ ಮೀಟರ್ ವರೆಗೂ ಪೆಂಡಾಲ್ ಹಾಕಲಾಗಿದೆ. ಮುಂದೆ ಎರಡು ಖಡ್ಗ ನೇತುಹಾಕಲಾಗಿತ್ತು. ಅವುಗಳಿಗೂ ಪ್ಯಾಲೆಸ್ಟೀನ್ ಧ್ವಜದ ಬಣ್ಣ ಹಚ್ಚಲಾಗಿತ್ತು. ಇದನ್ನು ಪೊಲೀಸರು ತೆರವುಗೊಳಿಸಿದ್ದಾರೆ. ವೀರಭದ್ರ ನಗರದ ಬೀದಿಯಲ್ಲಿಯೂ ಇದೇ ರೀತಿ ಶಾಮಿಯಾನ್ ಹಾಕಲಾಗಿತ್ತು. ಕೆಂಪು ಬಣ್ಣದ ಬಟ್ಟೆ ತೆಗೆಸಿದ್ದು ಅದನ್ನು ಪಕ್ಕದಲ್ಲಿ ನೇತು ಬಿಡಲಾಗಿದೆ. ಒಟ್ಟಿನಲ್ಲಿ ಒಂದು ಸಮುದಾಯದ ಪರ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ದೇಶಕ್ಕೆ ದೊಡ್ಡ ಅಪಾಯ ತರಲಿದೆ ಎಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ.

WhatsApp Group Join Now
Telegram Group Join Now
Share This Article