ಪ್ರಜಾಸ್ತ್ರ ಸುದ್ದಿ
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಟನೆಯ ಭೈರತಿ ರಣಗಲ್(Bhairathi Ranagal) ಚಿತ್ರದ ಟೈಟಲ್ ಸಾಂಗ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ‘ಇತಿಹಾಸವೇ ನಿಬ್ಬೆರಗಿಸುತ ಎತ್ತಿ ಹಿಡಿದಿರೊ ಮೈಲುಗಲ್ಲು.. ಉದ್ದಗಲಕೂ ಕೇಳಿ ನೋಡು ರಾಯ ರಾಯಭಾರಿ ಭೈರತಿ ರಣಗಲ್ಲು’ ಎನ್ನುವ ಸಾಲುಗಳೊಂದಿಗೆ ಶುರುವಾಗುವ ಹಾಡು ಶಿವಣ್ಣನ(NimmaShivanna) ರೋಲ್ ಹೇಗಿರಬಹುದು ಅನ್ನೋ ಝಲಕ್ ತೋರಿಸುತ್ತೆ. ಮಫ್ತಿ ಪ್ರೀಕ್ವೆಲ್ ಆಗಿರುವ ಈ ಸಿನಿಮಾ ಸಿನಿ ಪ್ರೇಕ್ಷಕರು ಮತ್ತೊಮ್ಮೆ ಕಿಕ್ ಕೊಡಲು ರೆಡಿಯಾಗುತ್ತಿದೆ.
ಕಿನ್ನಾಳ ರಾಜ ಸಾಹಿತ್ಯ ಬರೆದಿದ್ದು, ಸಂತೋಷ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್(Ravi Basrur) ಹಾಗೂ ತಂಡ ಸಂಗೀತ ಸಂಯೋಜನೆ ಮಾಡಿದೆ. ನಿರ್ತನ್(Narthan) ನಿರ್ದೇಶನ ಮಾಡಿದ್ದು, ಗೀತಾ ಪಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿದ್ದಾರೆ. ನಟಿ ರುಕ್ಮಿಣಿ ವಸಂತ, ಹಿರಿಯ ನಟರಾದ ಅವಿನಾಶ್, ದೇವರಾಜ್ ಸೇರಿ ದೊಡ್ಡ ತಾರಾಬಳಗವಿದೆ.




