ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ನಗರದಲ್ಲಿ ಶನಿವಾರ ಮುಂಜಾನೆವರೆಗೂ ಭರ್ಜರಿ ಮಳೆಯಾಗಿದೆ. ಗುಡುಗು ಸಹಿತಿ ಭಾರೀ ಮಳೆಯಾಗಿದೆ. ಸಂಜೆಯಿಂದ ಶುರುವಾದ ಮಳೆ ಶನಿವಾರ ನಸುಕಿನಜಾವ 2.30ರ ತನಕ ಮಳೆಯಾಗಿದೆ. ಇದರಿಂದಾಗಿ ಸಾಕಷ್ಟು ಅಸ್ತವ್ಯಸ್ತವಾಗಿದೆ. ನ್ಯಾಮತಿ, ಮಾಯಕೊಂಡ, ಕಡರನಾಯ್ಕನಹಳ್ಳಿ, ಹೊನ್ನಾಳಿ, ಸಂತೇಬೆನ್ನೂರು ಸೇರಿದಂತೆ ಹಲವು ಕಡೆ ಸಾಕಷ್ಟು ಸಮಸ್ಯೆಯಾಗಿದೆ. ಜಮೀನುಗಳಲ್ಲಿ ನೀರು ನಿಂತಿದೆ. ಒಂದು ಕಡೆ ಮಳೆ ನಿರೀಕ್ಷೆಯಿದ್ದ ಜನರಿಗೆ ಸಂತೋಷ. ಮತ್ತೊಂದು ಕಡೆ ಒಂದಿಷ್ಟು ಸಂಕಷ್ಟ ಎದುರಾಗಿದೆ.