ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾ ಜ್ಯುವೆಲರ್ಸ್(Bhima Jewellers) ಮಾಲೀಕರ ಪುತ್ರನನ್ನು ಬಂಧಿಸಲಾಗಿದೆ. ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರು ವಿಷ್ಣು ಭಟ್ ಎಂಬಾತನನ್ನು ಬಂಧಿಸಿದ್ದಾರೆ. ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಈತನ ಮೇಲೆ ದಾಖಲಾಗಿತ್ತು. ಫೆಬ್ರವರಿ 7ರಂದು ಗಲಾಟೆ ಮಾಡಿ ಹೆಲ್ಮೆಟ್ ನಿಂದ ಬೈಕ್ ಒಡೆದಿದ್ದ. ಫೆಬ್ರವರಿ 26ರಂದು ಮತ್ತೆ ಗಲಾಟೆ ಮಾಡಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ವಿಷ್ಣು ಭಟ್ ನನ್ನು ಬಂಧಿಸಲಾಗಿದೆ.