Ad imageAd image

ಭೋಜಶಾಲಾ ವಿವಾದ: ಪೂಜೆ-ನಮಾಜ್ ಗೆ ಸುಪ್ರೀಂ ಅವಕಾಶ

Nagesh Talawar
ಭೋಜಶಾಲಾ ವಿವಾದ: ಪೂಜೆ-ನಮಾಜ್ ಗೆ ಸುಪ್ರೀಂ ಅವಕಾಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಬೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ಹಿಂದುಗಳಿಗೆ ಪೂಜೆ ಸಲ್ಲಿಸಲು ಹಾಗೂ ಮುಸ್ಲಿಂರಿಗೆ ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಜನವರಿ 23ರಂದು ನಡೆಯುವ ವಸಂತ ಪಂಚಮಿ ಪ್ರಯುಕ್ತ ಭೋಜಶಾಲಾ ಆವರಣದಲ್ಲಿ ಸರಸ್ವತಿ ಪೂಜೆ ಸಲ್ಲಿಸಲಾಗುತ್ತೆ. ಹೀಗಾಗಿ ಹಿಂದೂ-ಮುಸ್ಲಿಂ ಸಮುದಾಯದವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯ ಬಾಗ್ಚಿ, ವಿಪುಲ್ ಎಂ.ಪಾಂಚೋಲಿ ಅವರಿದ್ದ ಪೀಠ, ಎರಡು ಕಡೆಯಿಂದ ವಾದ ಆಲಿಸಿದರು. ಪೂಜೆ ಸಲ್ಲಿಸಲು ಬರುವವರ ಹಾಗೂ ನಮಾಜ್ ಮಾಡಲು ಬರುವವರ ಹೆಸರುಗಳನ್ನು ಜಿಲ್ಲಾಡಳಿತಕ್ಕೆ ಕೊಡಬೇಕು. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಮಾರ್ಗಸೂಚಿಗಳನ್ನು ಗೌರವಯುತವಾಗಿ ಪಾಲಿಸುವಂತೆ ಸೂಚಿಸಿದೆ.

11ನೇ ಶತಮಾನದ ಸ್ಮಾರಕವಾಗಿರುವ ಭೋಜಶಾಲಾವನ್ನು ಹಿಂದೂಗಳು ವಾಗ್ದೇವಿಯ ದೇವಸ್ಥಾನ ಎನ್ನುತ್ತಾರೆ. ಮುಸ್ಲಿಂರು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ. 2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ(ಎಎಸ್ಐ) ಆದೇಶದ ಅನ್ವಯ ಪ್ರತಿ ಮಂಗಳವಾರ ಹಿಂದೂಗಳು ಪೂಜೆ, ಶುಕ್ರವಾರ ಮುಸ್ಲಿಂವರು ನಮಾಜ್ ಮಾಡುತ್ತಾರೆ.

WhatsApp Group Join Now
Telegram Group Join Now
Share This Article