ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಚಂದನವನದ ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿದೆ. ಅಲ್ಲಿದ್ದ ಸ್ಮಾರಕವನ್ನು ಇತ್ತೀಚೆಗೆ ಧ್ವಂಸ ಮಾಡಲಾಗಿದೆ. ಅಲ್ಲಿ 10 ಗುಂಟೆ ಜಾಗ ಮೀಸಲು ಇಡಬೇಕು ಹಾಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಷ್ಣುವರ್ಧನ್ ಪತ್ನಿ, ಹಿರಿಯ ನಟಿ ಭಾರತಿ ಹಾಗೂ ಅಳಿಯ ಅನಿರುದ್ಧ್ ಅವರು ಮನವಿ ಸಲ್ಲಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿಯನ್ನು ಭೇಟಿಯಾದ ಇವರು, ಅಭಿಮಾನ್ ಸ್ಟುಡಿಯೋ ಜಾಗ ಈಗ ಸರ್ಕಾರದ ವಶಕ್ಕೆ ಬಂದಿದೆ. ಹೀಗಾಗಿ ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಸ್ಥಳ ಸೇರಿ 10 ಗುಂಟೆ ಜಾಗ ಮೀಸಲು ಇಡಬೇಕು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಕೋರಿಕೊಂಡಿದ್ದಾರೆ. ಮಂಗಳವಾರವಷ್ಟೇ ನಟಿಯರಾದ ಜಯಮಾಲಾ, ಶ್ರುತಿ ಹಾಗೂ ಮಾಳ್ವಿಕಾ ಅವರು ಸಹ ಸಿಎಂ ಭೇಟಿ ಮಾಡಿ ವಿಷ್ಣುರ್ವಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಮನವಿ ಸಲ್ಲಿಸಿದ್ದಾರೆ.