ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೈಕ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಅದು ವಿಕೋಪಕ್ಕೆ ಹೋಗಿದೆ. ಆಗ ಹೆಂಡತಿ ಹಾಗೂ ಅತ್ತೆ, ಮಾವನ ಮೇಲೆ ಪೆಟ್ರೋಲ್ ಸುರಿದ ಪೆಟ್ರೋಲ್ ಹಚ್ಚಿದ ಘಟನೆ ನಡೆದಿದೆ. ಉತ್ತರ ಭಾಗದ ತರಬನಹಳ್ಳಿಯಲ್ಲಿ ಇಂತಹದೊಂದು ಕೃತ್ಯ ನಡೆದಿದೆ. ಆಟೋ ಚಾಲಕ ಪಾಂಡುರಂಗ(32) ಎಂಬಾತನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಾಗಿರುವ ಪಾಂಡುರಂಗ ಹಾಗೂ ಪತ್ನಿ ಸುಮಲತಾ ನಡುವೆ ಗಲಾಟೆಯಾಗಿದೆ. ಹೀಗಾಗಿ ಪತ್ನಿ ಸುಮಲತಾ ತರಬನಹಳ್ಳಿಯಲ್ಲಿರುವ ತವರು ಮನೆಗೆ ಬಂದಿದ್ದಾಳೆ. ಮಾರ್ಚ್ 6ರಂದು ಇಲ್ಲಿಗೆ ಬಂದ ಪಾಂಡುರಂಗ ತಾನು ಕೊಟ್ಟ ಬೈಕ್ ವಾಪಸ್ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗಲಾಟೆಯಾಗಿದೆ. ಆಗ ಹೆಂಡತಿ, ಅತ್ತೆ ಮಂಜುಳಾ(43), ಮಾವ ಶ್ರೀರಾಮ(48) ಮೇಲೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಪಾಂಡುರಂಗ, ಸುಮಲತಾ ಪ್ರೀತಿಸಿ ಕಳೆದ ವರ್ಷ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಕೌಟುಂಬಿಕ ಕಲಹದಿಂದಾಗಿ ಸುಮಲತಾ ತವರು ಮನೆಗೆ ಬಂದಿದ್ದಳು. ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




