ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಚುನಾವಣೋತ್ತರ ಸಮೀಕ್ಷೆಯನ್ನು ಮೀರಿ ಫಲಿತಾಂಶ ಬಂದಿದೆ. ಈ ಮೂಲಕ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಇದು ಅಭಿವೃದ್ಧಿಯ ಗೆಲುವು, ಸಾರ್ವಜನಿಕ ಕಲ್ಯಾಣದ ಗೆಲುವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನು ಆರ್ ಜೆಡಿ, ಕಾಂಗ್ರೆಸ್ ಮೈತ್ರಿಯ ಮಹಾಘಟಬಂಧನಕ್ಕೆ ತೀವ್ರ ಹಿನ್ನಡೆಯಾಗಿದೆ.
ಎನ್ ಡಿಎ 204 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮ್ಯಾಜಿಕ ನಂಬರ್ ದಾಟಿ ಹೋಗಿದೆ. 2020 ಚುನಾವಣೆಯಲ್ಲಿ 125 ಸ್ಥಾನ ಪಡೆದಿತ್ತು. ಇನ್ನು ಎಂಜಿಬಿ ಕೇವಲ 32 ಸ್ಥಾನಗಳನ್ನು ಪಡೆದಿದೆ. ಇದು ಕಳೆದ ಬಾರಿ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರರು 7 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದಾರೆ. 2020ರ ಚುಣಾವಣೆಯಲ್ಲಿ 110 ಸ್ಥಾನ ಗಳಿಸಿದ್ದ ಮಹಾಘಟಬಂಧನಕ್ಕೆ ಈ ಭಾರಿ ಇಷ್ಟೊಂದು ದೊಡ್ಡ ಮಟ್ಟದ ಸೋಲಾಗಿದ್ದು ಹೇಗೆ ಅನ್ನೋ ಪ್ರಶ್ನೆ ಮೂಡಿದೆ.
ಅಲಿನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 25 ವರ್ಷದ ಮೈಥಿಲಿ ಠಾಕೂರ್ 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಅತ್ಯಂತ ಕಿರಿಯ ಶಾಸಕಿಯಾಗಿದ್ದಾರೆ.




