ಪ್ರಜಾಸ್ತ್ರ ಸುದ್ದಿ
ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸೀಸನ್ 11 ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಇದೊಂದು ಹುಚ್ಚರ ಸಂತೆ ಎಂದು ಜನರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಹಣ, ಹೆಸರು ಸಲುವಾಗಿ ಏನು ಬೇಕಾದರೂ ಮಾಡಲು ಸೈ ಎನ್ನುವಂತೆ ಮಾಡುತ್ತಿದೆ. ಶೋದಲ್ಲಿ ನೀಡಿದ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ನಡೆದ ಗಲಾಟೆಯಲ್ಲಿ ಸ್ಪರ್ಧಿ ಶಿಶಿರ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಇದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಮೂಲಕ ವೀಕ್ಷರನ್ನು ಮತ್ತಷ್ಟು ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವವರು ಸೇರಿದಂತೆ ಬರೀ ವಿವಾದಗಳಿಂದಲೇ ಚಾಲ್ತಿಯಲ್ಲಿರುವ ಕೆಲವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿದೆ. ಟಾಸ್ಕ್ ಹೆಸರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಸ್ಪರ್ಧಿ ಅಸ್ವಸ್ಥಗೊಂಡಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ.