Ad imageAd image

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಸ್ಪರ್ಧೆ

Nagesh Talawar
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಸ್ಪರ್ಧೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಪಾಟ್ನಾ(Patna): ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಗುರುವಾರ ಘೋಷಿಸಿದ್ದಾರೆ. ಈ ಮೂಲಕ 2005ರಿಂದ ಸುದೀರ್ಘವಾಗಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅಧಿಕಾರಕ್ಕೆ ತೆರೆ ಬೀಳಲಿದೆ. ಇವರ ಸ್ಥಾನಕ್ಕೆ ಬಿಜೆಪಿ ನಾಯಕ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

20ಕ್ಕೂ ಹೆಚ್ಚು ವರ್ಷಗಳಿಂದ ನನ್ನ ಮೇಲೆ ನಿರಂತರ ನಂಬಿಕೆ ಇಟ್ಟಿದ್ದೀರಿ. ಬೆಂಬಲ ನೀಡಿದ್ದೀರಿ. ಆ ನಂಬಿಕೆಯ ಆಧಾರದ ಮೇಲೆ ನಾನು ಕೆಲಸ ಮಾಡಿದ್ದೇನೆ. ನಿಮ್ಮ ನಂಬಿಕೆ, ಬೆಂಬಲದಿಂದಾಗಿ ಬಿಹಾರ ಅಭಿವೃದ್ಧಿಯ ಹಾದಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ನಿಮ್ಮೊಂದಗಿನ ನನ್ನ ಬಾಂಧವ್ಯ ಮುಂದೆಯೂ ಸಂಪೂರ್ಣವಾಗಿ ಮುಂದುವರೆಯಲಿದೆ. ಬಿಹಾರದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ಇರಲಿದೆ ಅಂತಾ ಹೇಳಿದ್ದಾರೆ.

ಬಿಹಾರದ 5 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಮತದಾನ ನಡೆಯಲಿದೆ. ಇಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ. ಹೀಗಾಗಿ ಇಂದು ನಿತೀಶ್ ಕುಮಾರ್ ತಮ್ಮ ಸ್ಪರ್ಧೆಯನ್ನು ಖಚಿತ ಪಡಿಸಿದ್ದಾರೆ. ಅಲ್ಲಿಗೆ ಇವರ ಸಿಎಂ ಯುಗಾಂತ್ಯವಾಗಲಿದೆ. ಬಿಜೆಪಿ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಪಡೆಯಲಿದೆ. 2025ರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ.

WhatsApp Group Join Now
Telegram Group Join Now
Share This Article