ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರ ವಿಧಾನಸಭೆ ಚುನಾವಣೆ-2025 ಭರ್ಜರಿ ರಂಗೇರಿದೆ. ಬುಧವಾರ ತಡರಾತ್ರಿ ಬಿಜೆಪಿ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. 18 ಅಭ್ಯರ್ಥಿಗಳು ಇರುವ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. 101 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಮೂರು ಹಂತಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.
ಜೆಡಿ(ಯು) ಹಾಗೂ ಬಿಜೆಪಿ ನಡುವೆ ತಲಾ 101 ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಎನ್ ಡಿಎ ಮೈತ್ರಿಯ ಇತರೆ ಪಕ್ಷಗಳಾದ ಎಲ್ ಜೆಪಿ 29, ಎಚ್ಎಎಂ 6 ಕ್ಷೇತ್ರಗಳಲ್ಲಿ ಮೈತ್ರಿಯಾಗಿದೆ. ಇನ್ನು ಕಾಂಗ್ರೆಸ್, ಆರ್ ಜೆಡಿ ಪಕ್ಷಗಳು ಇನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.