ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಇವತ್ತಿನ ಡಿಜಿಟಲ್ ಯುಗದಲ್ಲಿ ಯಾವುದಕ್ಕೂ ತಡೆಯಿಲ್ಲ. ಹೀಗಾಗಿ ಯಾವುದ್ಯಾವುದೊ ಕಾರಣಕ್ಕೆ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಅನೇಕರು ಫೇಮಸ್ ಆಗುತ್ತಿದ್ದಾರೆ. ಹೀಗಾಗಿ ಫೇಸ್(FB) ಬುಕ್, ಯುಟ್ಯೂಬ್, ಇನ್ಸ್ಟಾದಲ್ಲಿ ಇನ್ಪ್ಲುಯೆನ್ಸರ್ ಮೂಲಕ ವಿಡಿಯೋ, ಫೋಟೋ ಕಂಟೆಂಟ್ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಇದೆ ರೀತಿ ಯುವತಿಯೊಬ್ಬಳು ಇತ್ತೀಚೆಗೆ ಉಡುಪಿ ಬೀಚ್ ನಲ್ಲಿ ಬಿಕಿನಿ ಫೋಟೋಶೂಟ್ ಮಾಡಲು ಬಂದಾಗ ಕಿರಿಕ್ ಆಗಿದೆ.
ಕಯಾತಿ(Khyati Shree2) ಶ್ರೀ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಹೊಂದಿರುವ ಯುವತಿ ಹಾಗೂ ಪತಿ ಜೊತೆಗೆ ಉಡುಪಿಗೆ ಬಂದಿದ್ದಾರೆ. ಇಲ್ಲಿನ ಪಡುಕೆರೆ ಬೀಚ್ ಹತ್ತಿರ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದಾಳೆ. ಈಕೆಯ ಪತಿಯೇ ಫೋಟೋಗ್ರಾಫರ್ ಆಗಿದ್ದಾರೆ. ಇದನ್ನು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ. ಅವರು ಬಂದು ಎಚ್ಚಿಕೆ ಕೊಟ್ಟಿದ್ದಾರೆ. ಈ ರೀತಿಯ ಫೋಟೋ, ವಿಡಿಯೋಗೆ ಇಲ್ಲಿ ಅವಕಾಶವಿಲ್ಲ ಎಂದಿದ್ದಾರೆ. ಇದು ತನಗೆ ಆದ ಕಹಿ ಅನುಭವ ಎಂದು ಹೇಳಿಕೊಂಡಿದ್ದಾಳೆ. ಇನ್ಸ್ಟಾದಲ್ಲಿ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.