ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಕಿಚ್ಚ(Kichcha Sudeepa) ಸುದೀಪ್ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಇಂದು ಅವರ ನಟನೆಯ ಬಹುನಿರೀಕ್ಷಿತ ಬಿಲ್ಲಾ ರಂಗಾ ಭಾಷಾ ಚಿತ್ರದ ಟೈಟಲ್ ಲೋಗೋ ಹಾಗೂ ಕಾನ್ಸ್ ಪ್ಟ್ ವಿಡಿಯೋ ಬಿಡುಗಡೆ ಮಾಡಲಾಗಿದೆ. 2 ನಿಮಿಷದ ವಿಡಿಯೋದಲ್ಲಿ ಸಾಕಷ್ಟು ಕುತೂಹಲ ಮೂಡಿಸಲಾಗಿದೆ. ಕ್ರಿಸ್ತ ಪೂರ್ವ 2209 ಕಾಲಘಟ್ಟದ ಕಥೆ ಹೇಳಲು ಟೀಂ ಸಜ್ಜಾಗಿದೆ. ಅಮೆರಿಕಾದ ಸ್ವಾತಂತ್ರ್ಯ ದೇವತೆಯ ಅರ್ಧತಲೆ, ತ್ರಿಶೂಲ್, ಕಾಡು, ಮರಭೂಮಿ ದೃಶ್ಯದ ವಿಡಿಯೋ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಲಾಗಿದೆ.
ನಟ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಕ್ರಾಂತ್ ರೋಣಾ ಬಳಿಕ ನಿರ್ದೇಶಕ ಅನೂಪ್(Anup Bhandari) ಭಂಡಾರಿ ಹಾಗೂ ಸುದೀಪ್ ಮತ್ತೆ ಒಂದಾಗಿದ್ದಾರೆ. ರಂಗಿ(Rangi Taranga) ತರಂಗ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಚಂದನವನದಲ್ಲಿ ಕಮಾಲ್ ಮಾಡಿದ ನಿರ್ದೇಶಕ ಅನೂಪ್ ಭಂಡಾರಿ ವಿಕ್ರಾಂತ್ ರೋಣಾ ಚಿತ್ರದಲ್ಲಿ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಕೇಳಿದರು. ಸಿನ್ಮಾ ಕೂಡಾ ಸಕ್ಸಸ್ ಆಯ್ತು. ಬಹುದಿನಗಳಿಂದ ಬಿಲ್ಲಾ ರಂಗಾ ಭಾಷಾ(Billa Ranga Baasha) ಚಿತ್ರದ ಬಗ್ಗೆ ಸುದ್ದಿ ಹರಿದಾಡುತ್ತಿದೆ ಹೊರತು ಅಪ್ ಡೇಟ್ ಇರಲಿಲ್ಲ. ಸೆಪ್ಟೆಂಬರ್ 2 ಸುದೀಪ್ ಹುಟ್ಟು ಹಬ್ಬಕ್ಕೆ ಸಣ್ಣ ಅಪ್ ಡೇಟ್ ಕೊಟ್ಟು ನಿರೀಕ್ಷೆ ಮೂಡಿಸಲಾಗಿದೆ.