ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜೈಲಿನಲ್ಲಿರುವ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯಿ ಎನ್ ಕೌಂಟರ್ ಮಾಡುವ ಪೊಲೀಸಗೆ 1 ಕೋಟಿ 11 ಲಕ್ಷದ 11 ಸಾವಿರದ 11 ರೂಪಾಯಿ ಬಹುಮಾನ ಕೊಡುವುದಾಗಿ ಕ್ಷತ್ರೀಯ ಕರ್ಣ ಸೇನೆ(Kshatriya Karni Sena) ಘೋಷಿಸಿದೆ. ನಮ್ಮ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯಿ ಕಾರಣ. ಹೀಗಾಗಿ ಅವರ ಹತ್ಯೆಗೆ ಪ್ರತೀಕಾರವಾಗಿ ಈ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಕ್ಷತ್ರೀಯ ಕರ್ಣ ಸೇನೆ ಅಧ್ಯಕ್ಷ ರಾಜ್ ಶೇಖಾವತ್(Raj Shekhawat )ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ರಜಪೂತ್ ರಾಷ್ಟ್ರೀಯ ಕರ್ಣಿ ಸೇನೆ ನಾಯಕ ಬೊಗಮೆಡಿ ಹತ್ಯೆಗೆ ಪ್ರತೀಕಾರವಾಗಿ ಈ ಬಹುಮಾನ. ದೇಶದಲ್ಲಿ ಭಯದ ವಾತಾವರಣ ನಿರ್ಮಿಸುವುದಲ್ಲ. ಭಯ ಮುಕ್ತ ಮಾಡುವುದು ಎಂದಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಗೊಗಮೆಡಿ ಹತ್ಯೆ ಮಾಡಲಾಗಿದೆ. ಇದರ ಹೊಣೆಯನ್ನು ಬಿಷ್ಣೋಯಿ(Lawrence Bishnoi) ಹಾಗೂ ಗೋಲ್ಡಿ ಬ್ರಾರ್ ತಂಡದಲ್ಲಿ ಗುರುತಿಸಿಕೊಂಡಿದ್ದ ರೋಹಿತ್ ಗೋಡಾರಾ ಹೊತ್ತಿಕೊಂಡಿದ್ದ.