ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬಗ್ಗೆ ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ, ಚುನಾವಣೆಯಲ್ಲಿ ತಾನು ಗೆದ್ದರೆ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನಯವಾದ ರಸ್ತೆ ನಿರ್ಮಿಸುವೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬಿಹಾರದಲ್ಲಿ ಹೇಮಾ ಮಾಲಿನಿ ಕನ್ನೆಯಂತೆ ರಸ್ತೆ ನಿರ್ಮಿಸುವುದಾಗಿ ಲಾಲು ಪ್ರಸಾದ್ ಯಾದವ್ ಹೇಳಿದ್ದರು. ಅವರಿಂದ ಅದು ಸಾಧ್ಯವಾಗಿಲ್ಲ ಎಂದಿದ್ದಾರೆ.
ಓಖ್ಲಾ, ಸಂಗಮ್ ವಿಹಾರದಲ್ಲಿ ನಿರ್ಮಿಸಿರುವಂತೆ ಕಲ್ಕಾಜಿಯಲ್ಲಿಯೂ ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ರಸ್ತೆಗಳನ್ನು ನಿರ್ಮಿಸುವೆ ಹೇಳಿದ್ದು ವಿವಾದ ಪಡೆದುಕೊಂಡಿದೆ. ಕಾಂಗ್ರೆಸ್ ಸೇರಿ ವಿಪಕ್ಷಗಳ ನಾಯಕರು ಕಿಡಿ ಕಾರುತ್ತಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ, ಬಿಧುರಿ ಮಹಿಳೆಯರ ಬಗ್ಗೆ ತಮ್ಮ ಎಂದಿನ ಅಸಭ್ಯ ಭಾಷೆಯ ಮೂಲಕ ಅವಮಾನಿಸುವುದನ್ನು ಮುಂದುವರೆಸಿದ್ದಾರೆ ಎಂದಿದ್ದಾರೆ. ಇದು ದೊಡ್ಡದಾಗುತ್ತಿದ್ದಂತೆ. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ರಮೇಶ್ ಬಿಧುರಿ ಹೇಳಿದ್ದಾರೆ.