ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಜಯನಗರ ವಿಧಾನಸಭಾ ಕ್ಷೇತ್ರದ ಅನುದಾನ ವಿಚಾರ ಸಂಬಂಧ ಆಡಿದ ಮಾತಿಗೆ ಬಿಜೆಪಿ ಕಿಡಿ ಕಾರಿದೆ. ಹಿಟ್ಲರ್(Adolf Hitler) ರೀತಿಯಲ್ಲಿ ಡಿ.ಕೆ ಶಿವಕುಮಾರ್ ಅವರ ಫೋಟೋವನ್ನು ಎಡಿಟ್ ಮಾಡಿ, ಅಡೋಲ್ಟ್ ಹಿಟ್ಲರ್ ನ ಅಪರಾವತಾರ ಆ ದಿನಗಳ ಡಿ.ಕೆ ಶಿವಕುಮಾರ್ ಸಾಹೇಬ್ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.
ಕನ್ನಡಿಗರ ಶಾಂತಿ ಪ್ರಿಯರು ಎಂದ ಮಾತ್ರಕ್ಕೆ ನಿಮ್ಮ ದರ್ಪ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ನಿಮ್ಮ ಆ ದಿನಗಳ ಕೊತ್ವಾಲ್ ದರ್ಬಾರ್ ಅಂದಿಗೆ ಸೀಮಿತ ಇಂದಿಗಲ್ಲ ಎಂದು ಬರೆಯುವ ಮೂಲಕ ಆಕ್ರೋಶ ಹೊರ ಹಾಕಲಾಗಿದೆ. ಬಿಜೆಪಿ(BJP) ಸಂಸದ ತೇಜಸ್ವಿಸೂರ್ಯ ಜೊತೆಗೆ ಮಾತನಾಡುವಾಗ ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು ಎಂದಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ.