ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕದಲ್ಲಿ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ನಡುವೆಯೂ ಶಿಗ್ಗಾಂವ, ಸಂಡೂರ ಹಾಗೂ ಚನ್ನಪಟ್ಟಣ ತಾಲೂಕು ಒಳಗೊಂಡಂತೆ ರಾಜ್ಯವ್ಯಾಪಿ ಪ್ರಸಾರಗೊಳ್ಳುವ ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ನುಡಿದಂತೆ ನಡೆದಿದ್ದೇವೆ ಎನ್ನುವ ಹೆಸರಿನೊಂದಿಗೆ ಜಾಹೀರಾತು ನೀಡಲಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ದೂರು ಸಲ್ಲಿಸಲಾಗಿದೆ.
ಅಕ್ಟೋಬರ್ 15ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ಟೋಬರ್ 17ರಂದು ಜಾಹೀರಾತು ನೀಡಲಾಗಿದೆ. ಮುಖ್ಯಮಂತ್ರ, ಉಪ ಮುಖ್ಯಮಂತ್ರಿಯವರ ಫೋಟೋದೊಂದಿಗೆ ಕರ್ನಾಟಕ ಸರ್ಕಾರದ ಸಾಧನೆಗಳನ್ನು ತೋರಿಸಲಾಗಿದೆ. ಜನರ ದುಡ್ಡಿನಲ್ಲಿ ಜಾಹೀರಾತು ನೀಡಿರುವ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸ್ ವಿರುದ್ಧ ನೋಟಿಸ್ ನೀಡಬೇಕು ಅಂತಾ ದೂರು ಸಲ್ಲಿಸಲಾಗಿದೆ.