Ad imageAd image

ದೆಹಲಿ ಸ್ಫೋಟ: ಭದ್ರತಾ ವೈಫಲ್ಯ ಒಪ್ಪಿಕೊಳ್ಳುತ್ತಾ ಬಿಜೆಪಿ ಸರ್ಕಾರ?

Nagesh Talawar
ದೆಹಲಿ ಸ್ಫೋಟ: ಭದ್ರತಾ ವೈಫಲ್ಯ ಒಪ್ಪಿಕೊಳ್ಳುತ್ತಾ ಬಿಜೆಪಿ ಸರ್ಕಾರ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನವೆಂಬರ್ 10ರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ ಸ್ಫೋಟದಲ್ಲಿ ಇದುವರೆಗೂ 12 ಜನರು ಮೃತಪಟ್ಟಿದ್ದಾರೆ. ವೈಟ್ ಕಾಲರ್ ಗಳ ದಾಳಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಎಲ್ಲ ರೀತಿಯಿಂದ ತನಿಖೆ ನಡೆಯುತ್ತಿದೆ. ಆದರೆ, ಇದನ್ನು ಭದ್ರತಾ ವೈಫಲ್ಯವೆಂದು ದೆಹಲಿ ಬಿಜೆಪಿ ಸರ್ಕಾರ ಒಪ್ಪಿಕೊಳ್ಳುತ್ತಾ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಮ್ಮ ಸರ್ಕಾರದ ವೈಫಲ್ಯವೆಂದು ಒಪ್ಪಿಕೊಳ್ಳುತ್ತಾರಾ?

ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಇಂತಹದೊಂದು ಘಟನೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಬಿಜೆಪಿಯವರು ಕಿಡಿ ಕಾರುತ್ತಿದ್ದರು. ಪಾಕಿಸ್ತನದೊಂದಿಗೆ ಸಂಬಂಧ ಕಟ್ಟಿ ಆರೋಪಿಸುತ್ತಿದ್ದರು. ಆದರೆ, ಬಿಜೆಪಿ ಆಡಳಿತ ನಡೆಸುತ್ತಿರುವ ದೆಹಲಿಯಲ್ಲಿನ ಘಟನೆ ಬಗ್ಗೆ ಯಾರೊಬ್ಬರು ಚಕಾರ ಎತ್ತುತ್ತಿಲ್ಲ. ಘಟನೆ ನಡುವೆಯೂ ಪ್ರಧಾನಿ ಮೋದಿ ಭೂತಾನ್ ಪ್ರವಾಸ ಕೈಗೊಂಡರು. ಇದನ್ನು ಯಾವ ಮುಖ್ಯವಾಹಿನಿಯ ಮಾಧ್ಯಮಗಳು ಪ್ರಶ್ನೆ ಮಾಡಲೇ ಇಲ್ಲ. ದೇಶದಲ್ಲಿ ಇಂತಹದೊಂದು ದುರ್ಘಟನೆ ನಡೆದಿದೆ. ಅಮಾಯಕರ ಸಾವುಗಳು ಸಂಭವಿಸಿವೆ. ಆದರೆ, ಪ್ರಧಾನಿ ವಿದೇಶಿ ಪ್ರವಾಸ ಮಾಡಿದರು. ಪೂರ್ವನಿಯೋಜಿತ ಪ್ರವಾಸವಾಗಿದ್ದರೂ ಇಂತಹ ಸಂದರ್ಭದಲ್ಲಿ ಹೋಗುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ. ಇದಕ್ಕೆ ಬಿಜೆಪಿಗರ ಉತ್ತರ ಏನಿರುತ್ತೆ ಕಾದು ನೋಡಬೇಕಿದೆ.

WhatsApp Group Join Now
Telegram Group Join Now
Share This Article