Ad imageAd image

ವಿಜಯಪುರ: ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಸಚಿವರು, ಕಾಂಗ್ರೆಸ್ ಶಾಸಕರ ವರ್ತನೆ ಖಂಡಿಸಿ, ವಾಲ್ಮೀಕಿ ನಿಗಮ, ಮುಡಾ ಹಗರಣ

Nagesh Talawar
ವಿಜಯಪುರ: ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಸಚಿವರು, ಕಾಂಗ್ರೆಸ್ ಶಾಸಕರ ವರ್ತನೆ ಖಂಡಿಸಿ, ವಾಲ್ಮೀಕಿ(Valamiki Nigama) ನಿಗಮ, ಮುಡಾ(MUDA Scam) ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ವಿರೋಧಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು, ದಲಿತ ರಾಜ್ಯಪಾಲರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು, ಮುಖಂಡರು ಮನಸ್ಸಿಗೆ ಬಂದಂತೆ ಅವಹೇಳನಕಾರಿಯಾಗಿ ಹಾಗೂ ಏಕವಚನ ಪ್ರಯೋಗ ಮಾಡುವ ಮೂಲಕ, ಸಂವಿಧಾನಬದ್ಧ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ನಿಂದಿಸಿರುವುದು ಖಂಡನೀಯ ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ(CM and DCM) ಎದುರಲ್ಲೇ ಈ ರೀತಿಯ ಹೀನ ವರ್ತನೆ ನಡೆದರೂ ಅವರ ವಿರುದ್ಧ ಕ್ರಮಗೊಂಡಿಲ್ಲ. ಇದರಿಂದ ತಿಳಿಯುತ್ತದೆ ನಿಜವಾದ ದಲಿತ ವಿರೋಧಿಗಳು, ಸಂವಿಧಾನ ವಿರೋಧಿಗಳು ಯಾರು ಎನ್ನುವುದು. ಕೂಡಲೇ ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಸ್.ಟಿ(ST) ಸಮುದಾಯದ ಜನರಿಗೆ ಕಲ್ಪಿಸಬೇಕಾದ 187 ಕೋಟಿ ರೂಪಾಯಿ ಹಣವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಅನೇಕ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿ ಕೊಳ್ಳೆ ಹೊಡೆದಿದೆ. ಆ ಸಮುದಾಯಕ್ಕೆ ಅನ್ಯಾಯದ ಜೊತೆಗೆ ಅಮಾಯಕ ನೌಕರನ ಸಾವಿಗೂ ಕಾರಣವಾಗಿದೆ. ದಲಿತರು, ಹಿಂದುಳಿದವರ ಪರವೆಂದು ಭಾಷಣ ಮಾಡಿ ಅಧಿಕಾರಕ್ಕೆ ಬಂದು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿಗಬೇಕಾದ ಎಸ್.ಸಿಪಿ, ಟಿ.ಎಸ್.ಪಿ(SCP-TSP) 25 ಸಾವಿರ ಕೋಟಿ ಹಣವನ್ನು ಗ್ಯಾರೆಂಟಿಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ವಿಜುಗೌಡ ಪಾಟೀಲ, ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ವಾಲ್ಮೀಕಿ, ಮುಡಾ ಹಗರಣಗಳ ಬಗ್ಗೆ ದಾಖಲೆಗಳು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿದ್ದರೂ, ಮುಖಮಂತ್ರಿಗಳು ಸೇರಿ ಇಡೀ ಸರ್ಕಾರ ಏನು ಮಾಡೇ ಇಲ್ಲವೆಂದು ಭಂಡತನ ಪ್ರದರ್ಶಿಸುವುದು ಸರಿಯಲ್ಲ. ಇಡೀ ರಾಜ್ಯಕ್ಕೆ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದರು. ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಈರಣ್ಣ ಪಟ್ಟಣಶೆಟ್ಟಿ,  ಪ್ರಭುಗೌಡ ಅಸ್ಕೆ, ಅನಿಲ ಜಮಾದಾರ್, ಸಿದ್ದು ಬುಳ್ಳ, ಮಂಜುನಾಥ್ ಮೀಸೆ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಉಮೇಶ ಕೊಲ್ಕರ್, ಕಾಸುಗೌಡ ಬಿರಾದಾರ, ಸಂಜು ಐಹೊಳಿ, ಮಳುಗೌಡ ಬಿರಾದಾರ, ಮಹೇಂದ್ರ ನಾಯಕ, ಶಂಕರ ಹೂಗಾರ, ಎಂ.ಎಸ್.ಕರಡಿ, ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಸ್ವಪ್ನಾ ಕಣಮುಚನಾಳ, ಕುಮಾರ ಗಡಗಿ, ಮಹೇಶ ಒಡೆಯರ, ವಿಕ್ರಮ ಗಾಯಕವಾಡ, ವಿಜಯ ಜೋಶಿ, ಮಡಿವಾಳ ಯಾಳವಾರ, ಅಶೋಕ ಬೆಲ್ಲದ, ದತ್ತಾ ಗೊಲಂಡೆ, ಲಕ್ಷ್ಮಣ ಜಾಧವ, ಪಾಂಡು ಸಾಹುಕಾರ ದೊಡಮನಿ, ರಾಹುಲ ಜಾಧವ, ಬಾಬು ಶಿರಶ್ಯಾಡ, ಲಕ್ಷ್ಮೀ ಕನ್ನೊಳ್ಳಿ, ಚಂದ್ರು ಚೌದರಿ, ಬಸು ಹೂಗಾರ, ಮಲ್ಲಿಕಾರ್ಜುನ ಕಿವ್ಡಿ, ಸಂತೋಷ ಪಾಟೀಲ, ಸಂಜಯ ಪಾಟೀಲ ಕನಮಡಿ, ಕೃಷ್ಣ ಗುನಾಲ್ಕರ್, ರಾಜೇಶ ತೋಸೆ ಕಾಂತು ಸಿಂಧೆ ಸೇರಿದಂತೆ ಮತ್ತಿತರರು ಇದ್ದರು.

WhatsApp Group Join Now
Telegram Group Join Now
Share This Article