ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (grahlaxmi yojane) ಹಣ ಕಳೆದ ನಾಲ್ಕು ತಿಂಗಳಿನಿಂದ ಬರುತ್ತಿಲ್ಲವೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿನ ಮಹಿಳೆಯರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ಹಣ ಜಮಾ ಆಗದೆ ಇರುವುದು ತಿಳಿದು ಬಂದಿದೆ.
ಗೃಹಲಕ್ಷ್ಮಿ ಹಣ(Money) ಬರದೆ ಇರುವ ಸಂಬಂಧ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಟೂನ್ ವೊಂದನ್ನು ಹಂಚಿಕೊಳ್ಳುವ ಮೂಲಕ ಟಾಂಟ್ ಕೊಟ್ಟಿದೆ.
ಜಮೆಯಾಗದ ಗೃಹಲಕ್ಷ್ಮಿ ಹಣ. ಕಾಂಗ್ರೆಸ್ ಗೆ ಶಾಪ ಹಾಕುತ್ತಿರುವ ಮಹಿಳೆಯರು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ಹೇಳುತ್ತಲೇ, ಸಾರ್ ಗೃಹಲಕ್ಷ್ಮಿ ಹಣ ಬಾರದೆ ನಾಲ್ಕು ತಿಂಗಳಾಯ್ತು(ಮಹಿಳೆಯರ ಚಿತ್ರ).. ಎಲೆಕ್ಷನ್ ಮುಗಿತಲ್ಲಮ್ಮಾ, ಮುಂದೆ ಯಾವುದಾದ್ರೂ ಎಲೆಕ್ಷನ್ ಬಂದಾಗ(ಸಿಎಂ, ಡಿಸಿಎಂ, ಸಚಿವೆ ಚಿತ್ರ) ನೋಡೋಣ! ಎನ್ನುವ ಸಾಲುಗಳೊಂದಿಗೆ ಇರುವ ಕಾರ್ಟೂನ್(cartoon) ಹಂಚಿಕೊಂಡು ಕುಟುಕಲಾಗಿದೆ.
ಚಿತ್ರ ಕೃಪೆ: ಬಿಜೆಪಿ ಫೇಸ್ ಬುಕ್