Ad imageAd image

ಬಾಗಲಕೋಟೆ: ಚರಂತಿಮಠಗೆ ಬಿಜೆಪಿ ಟಿಕೆಟ್

Nagesh Talawar
ಬಾಗಲಕೋಟೆ: ಚರಂತಿಮಠಗೆ ಬಿಜೆಪಿ ಟಿಕೆಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ(Bagalakote): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್.ವೈ ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ, ಬಿಜೆಪಿಯಿಂದ ವೀರಣ್ಣ ಚರಂತಿಮಠಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿ ಟಿಕೆಟ್ ಪಡೆಯಲು ಹಲವು ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಚರಂತಿಮಠಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.

2004ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮುಂದೆ 2008ರಲ್ಲಿಯೂ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವೈ ಮೇಟಿ ವಿರುದ್ಧ ಸೋಲು ಕಂಡಿದ್ದರು. ಮುಂದೆ 2018ರಲ್ಲಿ ಇದೆ ಮೇಟಿ ವಿರುದ್ಧ ವಿಜಯ ಸಾಧಿಸಿದರು. ಬಳಿಕ 2023ರ ಚುನಾವಣೆಯಲ್ಲಿ ಇಲ್ಲಿಯ ಮತದಾರರು ಹೆಚ್.ವೈ ಮೇಟಿ ಕೈ ಹಿಡಿದರು. ಮೂರು ಬಾರಿ ಶಾಸಕರಾಗಿದ್ದ ವೀರಣ್ಣ ಚರಂತಿಮಠಗೆ ಬಿಜೆಪಿ ಮಣೆ ಹಾಕಿದೆ. ಕೈ ಅಭ್ಯರ್ಥಿ ಯಾರು ಅನ್ನೋದು ಅಂತಿಮವಾಗಬೇಕಿದೆ.

WhatsApp Group Join Now
Telegram Group Join Now
Share This Article