ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಭಾರತೀಯ ಕಿಸಾನ್ ಯೂನಿಯನ್ ವಿರೋಧ ವ್ಯಕ್ತಪಡಿಸಿದೆ. ಈ ಸಂಘಟನೆಯ ಮುಖ್ಯಸ್ಥ ರಾಕೇಶ್ ಟಿಕಾಯತ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ಒಪ್ಪಂದ ಅಪಾಯಕಾರಿಯಾಗಿದೆ. ಇದರ ವಿರೋಧ ಹೋರಾಟ ಮಾಡುವುದು ಒಂದೇ ದಾರಿ ಎಂದಿದ್ದಾರೆ.
ಇದೊಂದು ಏಕಪಕ್ಷೀಯ ಒಪ್ಪಂದವಾಗಿದೆ. ಭಾರತೀಯ ರೈತರು ಇದನ್ನು ಒಪ್ಪುವುದಿಲ್ಲ. ರೈತರನ್ನು ರಕ್ಷಿಸಲಾಗುವುದು ಅನ್ನೋ ಸರ್ಕಾರದ ಮಾತುಗಳು ಸುಳ್ಳು. ಫೆಬ್ರವರಿ 12ರಂದು ನಡೆಯುವ ಪ್ರತಿಭಟನೆಗೆ ರೈತರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.




