ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಬಾಬಾ ವೇಷದಲ್ಲಿ ಬಂದು ಬ್ಲ್ಯಾಕ್ ಮಾಜಿಕ್ ಮಾಡಿ ಯುವಕನಿಗೆ ಮೋಷ ಮಾಡಿದ ಘಟನೆ ಆನೇಕಲ್ ಪಟ್ಟಣದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿದೆ. ಯುವಕನ ಬಳಿ ಹಣ, ವಾಚ್ ದೋಚಿಕೊಂಡು ಪರಾರಿಯಾಗಿದ್ದಾನೆ. ಆನೇಕಲ್ ಪಟ್ಟಣದ ಚಂದಾಪುರ ಮುಖ್ಯ ರಸ್ತೆಯ ಪೊಲೀಸ್ ಕ್ವಾಟರ್ಸ್ ಮುಂಭಾಗದಲ್ಲಿನ ಐಮ್ಯಾಕ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ನವಿಲುಗರಿಯಿಂದ ತಲೆಗೆ ಸವರುತ್ತಾನೆ. ಆಗ ಮೋಸ ಹೋದ ಸಂತೋಷ ಹಣ ಇಲ್ಲ ಎಂದಿದ್ದಾನೆ. ಒತ್ತಾಯ ಮಾಡಿದಾಗ 2 ರೂಪಾಯಿ ಕೊಟ್ಟಿದ್ದಾನೆ. ಅದನ್ನು ತಕ್ಷಣ ರುದ್ರಾಕ್ಷಿ ಮಾಡಿದ್ದಾನೆ. ಬಳಿಕ ನೂರು ರೂಪಾಯಿ ಕೊಟ್ಟಾಗ ಅದನ್ನು ಸಾಯಿಬಾಬಾ ವಿಗ್ರಹ ಮಾಡಿದ್ದಾನೆ. ಇದಾದ ಬಳಿಕ ಸಂತೋಷ ತನಗೆ ಅರಿವಿಲ್ಲದಂತೆ ಒಂದು ಸಾವಿರ ರೂಪಾಯಿ ಕೊಟ್ಟು, ವಾಚ್ ಅನ್ನು ಆತನಿಗೆ ತೊಡಿಸಿದ್ದಾನೆ. ಆತ ಹೋಗಿದ್ದಾನೆ. ಇದಾದ ಮೇಲೆ ಸಂತೋಷ ಸಿಸಿಟಿವಿ ನೋಡಿದಾಗ ತಾನು ಮೋಸ ಹೋಗಿರುವುದು ತಿಳಿದಿದೆ.