ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸೋಮವಾರ ತಡರಾತ್ರಿ ಭರ್ಜರಿಯಾಗಿ ಮಳೆಯಾದ ಪರಿಣಾಮ ಟಾಟಾ ಲೇಔಟ್ ನಲ್ಲಿರುವ ಬರೋಬ್ಬರಿ 600 ಮನೆಗಳಿಗೆ ನೀರು ನುಗ್ಗಿದೆ. ಬಾಲಾಜಿ ಲೇಔಟ್ ನಲ್ಲಿಯೂ ಇದೆ ಪರಿಸ್ಥಿತಿ. ನೆಲಮಹಡಿಗಳು ಮುಳುಗಿವೆ. ಹೀಗಾಗಿ ಪಾರ್ಕಿಂಗ್ ಮಾಡಿದ ವಾಹನಗಳು ಅರ್ಧ ಮುಳುಗಿವೆ.
ಇನ್ನು ರಸ್ತೆಯ ತುಂಬ ನೀರು ನಿಂತುಕೊಂಡಿದೆ. ಹೆಬ್ಬಾಳ ಕೆರೆ ಹಾಗೂ ದೊಡ್ಡಬೊಮ್ಮಸಂದ್ರ ಕರೆಗಳ ನಡುವೆ ಈ ಎರಡು ಲೇಔಟ್ ಗಳಿವೆ. ಕೆರೆ ಕೋಡಿ ಬಿದ್ದ ಪರಿಣಾಮ ಈ ಎರಡೂ ಲೇಔಟ್ ಗಳಲ್ಲಿರುವ ಜನರಿಗೆ ತೊಂದರೆಯಾಗುತ್ತಿದೆ. ಕಾಲುವೆ ಮೂಲಕ ಹೆಬ್ಬಾಳ ಕೆರೆಗೆ ಹೋಗುವ ನೀರಿನಿಂದ ಅದು ತುಂಬಿದ ಪರಿಣಾಮ ಇಷ್ಟೊಂದು ಅವಾಂತರ ಸೃಷ್ಟಿಯಾಗಿದೆ. ಇದರಿಂದಾಗಿ ನಗರದಲ್ಲಿ ಬೋಟ್ ಸಂಚರಿಸಿ ಜನರನ್ನು ಸ್ಥಳಾಂತರಿಸಬೇಕಾಗಿದೆ.