ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಹೊರಗೆ ಆಟವಾಡಲು ಹೋದ ಇಬ್ಬರು ಮಕ್ಕಳು ಗುರುವಾರ ಸಂಜೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ. ದುರಾದೃಷ್ಟವಶಾತ್ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಟಿಪಟೂರು ತಾಲೂಕಿನ ಹುಚ್ಚನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಯದುವೀರ್(08), ಮನಹೋರ್(10) ಮೃತ ಬಾಲಕರೆಂದು ತಿಳಿದು ಬಂದಿದೆ. ಕುಟುಂಬಸ್ಥರ ಆಕ್ರಂದನ ನೋಡದಾಗಿದೆ.
ನಿನ್ನ ಸಂಜೆ ಗ್ರಾಮಾಂತರ ಠಾಣೆಯಲ್ಲಿ ಕಾಣೆಯಾಗಿದ್ದರ ಬಗ್ಗೆ ದೂರು ನೀಡಿದ್ದರು. ಮಕ್ಕಳ ಶೋಧ ನಡೆಸಿದ್ದ ಪೊಲೀಸರು ಇಂದು ಮುಂಜಾನೆ ಗ್ರಾಮಕ್ಕೆ ಹೋಗುವ ಎತ್ತಿನಹೊಳೆ ನಾಲೆಯಲ್ಲಿ ಮಕ್ಕಳ ಶವ ನೋಡಿದ್ದಾರೆ. ನೀರಲ್ಲಿ ಆಟವಾಡಲು ಹೋಗಿ ದುರಂತ ನಡೆದಿದೆ ಎಂದು ಶಂಕಿಸಲಾಗಿದೆ. ಎತ್ತಿನಹೊಳೆ ನಾಲೆ ಕಾಮಗಾರಿ ನಡೆಯುತ್ತಿತ್ತು. ಈ ನಾಲೆಗೆ ಮಕ್ಕಳು ಬಿದ್ದು ಮೃತಪಟ್ಟಿರುವ ಅನುಮಾನವಿದೆ ಎನ್ನಲಾಗುತ್ತಿದೆ.