ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋದಾಗ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಮಂಗಳವಾರ ಸಂಜೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಕೇರಳದ ಪಾಲಕ್ಕಾಡ್ ಮೂಲದ ಕುಟುಂಬ ಪ್ರವಾಸಕ್ಕೆ ಬಂದಿತ್ತು. ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದರು. ನಾಪತ್ತೆಗೂ 5 ನಿಮಿಷ ಮೊದಲು ಬಾಲಕಿ ಶ್ರೀನಂದಾ ತಂದೆಯ ಮೊಬೈಲ್ ನಲ್ಲಿ ರೀಲ್ಸ್ ಮಾಡಿದ್ದಾಳೆ. ಜನದಟ್ಟಣೆಯ ನಡುವೆ ದಿಢೀರ್ ನಾಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ.
ಬಾಲಕಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ರಕ್ಷಣಾ ಪಡೆ ಥರ್ಮಲ್ ಡ್ರೋನ್ ಮೂಲಕ ಪತ್ತೆ ಕೆಲಸ ನಡೆಸಿತು. ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿಯ 60 ಜನರ 5 ತಂಡ ಶೋಧಕಾರ್ಯ ನಡೆಸಿತು. ಬಾಲಕಿ ನಾಪತ್ತೆಯಾದ ಜಾಗ ತುಂಬಾ ಕಡಿದಾಗಿದೆ. ದುರಂತವೆಂದರೆ ಇದೀಗ ಆಕೆಯ ಶವ ಪತ್ತೆಯಾಗಿದೆ.




