Ad imageAd image

ಬಾಲಿವುಡ್ ನಟ, ನಟಿಯರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ

Nagesh Talawar
ಬಾಲಿವುಡ್ ನಟ, ನಟಿಯರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಬಾಲಿವುಡ್ ನಟರಾದ ರಾಜ್ ಪಾಲ್, ಕಪಿಲ್ ಶರ್ಮಾ, ಕೋರಿಯೋಗ್ರಾಫರ್ ರೆಮೊ ಡಿಸೋಜಾ, ನಟಿ ಸುಗಂಧಾ ಮಿಶ್ರಾಗೆ ಜೀವ ಬೆದರಿಕೆ ಹಾಕಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇ-ಮೇಲ್ ಮೂಲಕ ವಿಷ್ಣು ಎನ್ನುವ ಹೆಸರಿನಿಂದ ಜೀವ ಬೆದರಿಕೆ ಹಾಕಲಾಗಿದೆ. ಡಿಸೆಂಬರ್ 14, 2024ರಂದು ಇ ಮೇಲ್ ಬಂದಿದೆ. ಈಗ ಇದು ಬೆಳಕಿಗೆ ಬಂದಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಇತ್ತೀಚೆಗೆ ಬಾಲಿವುಡ್ ನಟರಿಗೆ ಜೀವ ಬೆದರಿಕೆ ಮೇಲ್ ಗಳು ಬರುತ್ತಿರುವುದು ಹೆಚ್ಚಾಗಿದೆ. ಒಂದು ಕಡೆ ಸಲ್ಮಾನ್ ಖಾನ್ ಗೆ ಮೇಲಿಂದ ಮೇಲೆ ಜೀವ ಬೆದರಿಕೆಗಳು. ಇತ್ತೀಚೆಗೆ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ಇರಿದ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆತನ ಬಂಧನವಾಗಿದ್ದು ವಿಚಾರಣೆ ನಡೆಯುತ್ತಿದೆ. ಈಗ ನಟರಾದ ರಾಜ್ ಪಾಲ್ ಹಾಗೂ ಕಪಿಲ್ ಶರ್ಮಾ, ಕೋರಿಯೋಗ್ರಾಫರ್ ರೆಮೊ ಡಿಸೋಜಾ, ನಟಿ ಸುಗಂಧಾ ಮಿಶ್ರಾಗೆ ಜೀವ ಬೆದರಿಕೆ ಬಂದಿದೆ ಎನ್ನುವ ವರದಿಯಾಗಿದೆ.

WhatsApp Group Join Now
Telegram Group Join Now
Share This Article